ಕತ್ತೆಗೆ ಕೇಕ್ ತಿನ್ನಿಸಿ KCR ಹುಟ್ಟುಹಬ್ಬ ಆಚರಣೆ; NSUI ಅಧ್ಯಕ್ಷನ ಬಂಧನ
ತೆಲಂಗಾಣ: ಕತ್ತೆ ಕೊರಳಿಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಭಾವಚಿತ್ರ ನೇತುಹಾಕಿ, ಅದಕ್ಕೆ ಕೇಕ್ ತಿನ್ನಿಸುವ ಮೂಲಕ ಪ್ರತಿಭಟನೆ ನಡೆಸಿದ್ದ ತೆಲಂಗಾಣ NSUI ಅಧ್ಯಕ್ಷ ಬಲ್ಮೂರ್ ವೆಂಕಟ್ ಅವರನ್ನು ಬಂಧಿಸಲಾಗಿದೆ. ಪ್ರಾಣಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಹಾಗೂ ಪ್ರಾಣಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಲ್ಮೂರ್ ವೆಂಕಟ್ರನ್ನು ಬಂಧಿಸಲಾಗಿದೆ.
ಮೊನ್ನೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಸಿಎಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ತೋರಿಸಲು ಎನ್ಎಸ್ಯೈ ವಿನೂತನ ಪ್ರತಿಭಟನೆ ಹಮ್ಮಿಕೊಂಡಿತ್ತು. ಕತ್ತೆಯ ಕೊರಳಿಗೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಫೋಟೋ ನೇತುಹಾಕಿ, ಅದಕ್ಕೆ ಕೇಕ್ ತಿನ್ನಿಸಲಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟಿಆರ್ಎಸ್ ಮುಖಂಡರು, ಜಮ್ಮುಕುಂಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇತ್ತ ಪ್ರತಿಭಟನೆಯ ನಂತರ ಎನ್ಎಸ್ಯುಐ ಅಧ್ಯಕ್ಷ ಬಲ್ಮೂರ್ ವೆಂಕಟ್ ಅವರು ಗುರುವಾರ ರಾತ್ರಿ ಮೇದಾರಂನಲ್ಲಿ ನಡೆಯುತ್ತಿದ್ದ ಸಮ್ಮಕ್ಕ-ಸರಕ್ಕ ಜಾತ್ರೆಯಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಹುಜೂರಾಬಾದ್ನಲ್ಲಿ ಅವರನ್ನು ಬಂಧಿಸಲಾಗಿದೆ.