LifestyleNational

ಅಯೋಧ್ಯೆಯಲ್ಲಿ ಇಂದಿನಿಂದ ಪೂಜಾಕೈಂಕರ್ಯ; ಪ್ರತಿದಿನ ಏನೇನು ನಡೆಯುತ್ತೆ..?

ಅಯೋಧ್ಯೆ; ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಭಪ್ರತಿಷ್ಠೆಗೆ ಸಿದ್ಧತೆ ನಡೆದಿದೆ. ಜನವರಿ 22ರಂದು ಆಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ಅದಕ್ಕಾಗಿ ಇಂದಿನಿಂದ ಅಯೋಧ್ಯೆಯಲ್ಲಿ ಪೂಜಾಕೈಂಕರ್ಯಗಳು ನಡೆಯಲಿವೆ. ಇಂದಿನಿಂದ ದಿನವೂ ಪೂಜೆ, ಹೋಮ, ಹವನಗಳು ನಡೆಯಲಿದೆ. ಅದರ ವಿವರ ಈ ಕೆಳಗಿನಂತಿದೆ.

 

ಜನವರಿ 16
ಮಹಾಮಸ್ತಕಾಭಿಷೇಕದ ವಿಧಿವಿಧಾನ ಆರಂಭ

ದೇಗುಲದ ಟ್ರಸ್ಟ್ ನೇಮಿಸಿದ ಆತಿಥೇಯರು ಪ್ರಾಯಶ್ಚಿತ್ತ ಸಮಾರಂಭ

ಸರಯೂ ನದಿಯ ದಡದಲ್ಲಿ ‘ದಶವಿಧ’ ಸ್ನಾನ, ವಿಷ್ಣು ಪೂಜೆ

ಜನವರಿ 17
ರಾಮಲಲ್ಲಾ ಮೂರ್ತಿಯನ್ನು ಹೊತ್ತ ಮೆರವಣಿಗೆ ಅಯೋಧ್ಯೆಗೆ

ಮಂಗಳ ಕಲಶದಲ್ಲಿ ಸರಯೂ ಜಲವನ್ನು ಹೊತ್ತ ಭಕ್ತರು ರಾಮಜನ್ಮಭೂಮಿಗೆ

ಜನವರಿ 18
ಗಣೇಶ ಅಂಬಿಕಾ ಪೂಜೆ, ವರುಣ ಪೂಜೆ, ಮಾತೃಕಾ ಪೂಜೆ

ಬ್ರಾಹ್ಮಣ ವರಣ ಮತ್ತು ವಾಸ್ತು ಪೂಜೆ

ಜನವರಿ 19
ಪವಿತ್ರ ಅಗ್ನಿಯನ್ನು ಬೆಳಗಿಸುವ ಸಂಪ್ರದಾಯ

‘ನವಗ್ರಹ’ ಮತ್ತು ‘ಹವನ’ ಸ್ಥಾಪನೆ

ಜನವರಿ 20
ಗರ್ಭಗುಡಿಯನ್ನು ಸರಯೂ ನದಿ ನೀರಿನಿಂದ ತೊಳೆಯಲಾಗುತ್ತೆ

ವಾಸ್ತು ಶಾಂತಿ ಮತ್ತು ‘ಅನ್ನಾಧಿವಾಸ್’ ಆಚರಣೆ

ಜನವರಿ 21

ರಾಮಲಲ್ಲಾ ವಿಗ್ರಹಕ್ಕೆ 125 ಕಲಶಗಳಲ್ಲಿ ಸ್ನಾನ

ಜನವರಿ 22
ಆಹ್ವಾನಿತರೊಂದಿಗೆ 100 ಕ್ಕೂ ಹೆಚ್ಚು ಚಾರ್ಟರ್ಡ್ ಜೆಟ್‌ಗಳು ಅಯೋಧ್ಯೆಗೆ ಬಂದಿಳಿಯಲಿವೆ

150 ದೇಶಗಳ ಭಕ್ತರು ಅಯೋಧ್ಯೆ ‘ಪ್ರಾಣ ಪ್ರತಿಷ್ಠೆ’ಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ

ಮಧ್ಯಾಹ್ನ 12:30 ರಿಂದ 1 ಗಂಟೆಯ ವರೆಗೆ ‘ಪ್ರಾಣ ಪ್ರತಿಷ್ಠೆ’

 

ಜನವರಿ 23 ರಿಂದ ಭಕ್ತರಿಗಾಗಿ ಶ್ರೀರಾಮ ದೇವಾಲಯ ತೆರೆಯಲಾಗುತ್ತದೆ.

Share Post