International

ಯೂನಿಸ್‌ ಚಂಡಮಾರುತದ ರೌದ್ರಾವತಾರ:9ಮಂದಿ ದುರ್ಮರಣ:ಐರೋಪ್ಯ ರಾಷ್ಟ್ರಗಳಲ್ಲಿ ಅಲ್ಲೋಲ-ಕಲ್ಲೋಲ

ಸೆಂಟ್ರಲ್‌ ಅಟ್ಲಾಂಟಿಕ್:‌ ಯೂನಿಸ್ ಚಂಡಮಾರುತ(Storm Eunice) ಮಧ್ಯ ಅಟ್ಲಾಂಟಿಕ್‌ನಲ್ಲಿ ವಿನಾಶವನ್ನು ಸೃಷ್ಟಿ ಮಾಡುತ್ತಿದೆ. ವಾಯುವ್ಯ ಯೂರೋಪ್‌ನಲ್ಲಿ, (Northwestern Europe) ಯೂನಿಸ್‌ ಚಂಡಮಾರುತ ಗಂಟೆಗೆ 122 ಮೈಲುಗಳಷ್ಟು (196 ಕಿಲೋಮೀಟರ್) ವೇಗದಲ್ಲಿ ಬೀಸುತ್ತಿವೆ. ರಕ್ಕಸ ಗಾಳಿಗೆ ಇದುವರೆಗೆ 9 ಮಂದಿ ಬಲಿಯಾಗಿದ್ದಾರೆ.

ಉತ್ತರ ಐರೋಪ್ಯ ರಾಷ್ಟ್ರಗಳ ಪೈಕಿ, ಬೆಲ್ಜಿಯಂ, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾಗಿವೆ. ಬ್ರಿಟನ್‌ನಲ್ಲಿ ಚಂಡಮಾರುತಕ್ಕೆ ಇದುವರೆಗೆ ಮೂವರು ಸಾವನ್ನಪ್ಪಿದ್ದರೆ, ದಕ್ಷಿಣ ಇಂಗ್ಲೆಂಡ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಚಂಡಮಾರುತದಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಮಧ್ಯ ಅಟ್ಲಾಂಟಿಕ್‌ನಲ್ಲಿ ರೂಪುಗೊಂಡ ಯೂನಿಸ್ ಚಂಡಮಾರುತ, ಜೆಟ್ ಸ್ಟ್ರೀಮ್‌ ಮೂಲಕ ಅಜೋರ್ಸ್‌ನಿಂದ ಯುರೋಪ್‌ ಕಡೆಗೆ ಹೋಗುತ್ತಿದೆ. ಇದು ಅಲ್ಲಿನ ಜನರ ಜೀವಕ್ಕೆ ಅಪಾಯವನ್ನುಂಟುಮಾಡುವುದರಲ್ಲಿ ಸಂಶಯವೇ ಇಲ್ಲ ಎಂದು ಯುಕೆ ಹವಾಮಾನ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. .

ಚಂಡಮಾರುತವು ಪಶ್ಚಿಮ ಇಂಗ್ಲೆಂಡ್‌ಗೆ ಅಪ್ಪಳಿಸಿದೆ ಅಲ್ಲಿಂದ ಕಾರ್ನ್‌ವಾಲ್‌ ಸಮುದ್ರ ತೀರವನ್ನು ಮುಟ್ಟಿದೆ. ಚಂಡಮಾರುತದ ರಭಸಕ್ಕೆ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿವೆ. ರಕ್ಕಸ ಗಾಳಿಗೆ ಲಂಡನ್ ನಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಾಳಿಗೆ ತೂರಿ ಬಂದ ಅವಶೇಷಗಳು ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ವಾಹನದಲ್ಲಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಹ್ಯಾಂಪ್‌ಶೈರ್‌ನ ಸೌತ್ ಇಂಗ್ಲಿಷ್ ಕೌಂಟಿಯಲ್ಲಿ ಬಿದ್ದ ಮರಕ್ಕೆ ವಾಹನ ಡಿಕ್ಕಿ ಹೊಡೆದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ನೆದರ್ಲ್ಯಾಂಡ್ಸ್ನಲ್ಲಿ ಮರಗಳು ಬಿದ್ದು ಮೂವರು ಸಾವನ್ನಪ್ಪಿದ್ದಾರೆ.

ಬೆಲ್ಜಿಯಂನಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ಆಸ್ಪತ್ರೆಯ ಮೇಲ್ಛಾವಣಿ ಹಾರಿ ಹೀಗಿದೆ.  79 ವರ್ಷದ ಬ್ರಿಟಿಷ್ ವ್ಯಕ್ತಿಯೊಬ್ಬರು ತಮ್ಮ ದೋಣಿಯಿಂದ ನೀರಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಐರ್ಲೆಂಡ್‌ನಲ್ಲಿ ಚಂಡಮಾರುತದ ಅವಶೇಷಗಳನ್ನು ತೆರವುಗೊಳಿಸುವಾಗ ಮರ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲಂಡನ್‌ನಲ್ಲಿ ಅರೆನಾದ ಬಿಳಿ ಗೋಪುರದ ಮೇಲ್ಛಾವಣಿ ಒಡೆದು ಹೋಗಿದೆ. ಐಲ್ ಆಫ್ ವೈಟ್‌ನಲ್ಲಿರುವ ದಿ ನೀಡಲ್ಸ್‌ನಲ್ಲಿ 122mph ವೇಗವಾಗಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್‌ನಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಗಾಸ್ಟ್(gusts) ಎಂದು ಹವಾಮಾನ ಕಚೇರಿ ತಿಳಿಸಿದೆ.  ಚಂಡಮಾರುತ ಸ್ಕ್ಯಾಂಡಿನೇವಿಯಾ ಮತ್ತು ಉತ್ತರ ಮುಖ್ಯ ಭೂಭಾಗದ ಯುರೋಪ್ ಕಡೆಗೆ ಸಾಗುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಯೂನಿಸ್ ಚಂಡಮಾರುತದಿಂದಾಗಿ ಯುನೈಟೆಡ್ ಕಿಂಗ್‌ಡಂನಾದ್ಯಂತ ಒಟ್ಟು 436 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

 

Share Post