ದೇಶದಲ್ಲಿ ಕೊಲೆಗಳಿಗಿಂತ ಆತ್ಮಹತ್ಯೆ ಮಾಡಿಕೊಳ್ಳುವವರೇ ಐದು ಪಟ್ಟು ಹೆಚ್ಚು..!
ನವದೆಹಲಿ: ದೇಶದಲ್ಲಿ ಹತ್ಯೆಗಳಿಗಿಂತ ಆತ್ಮಹತ್ಯೆಗಳೇ ಹೆಚ್ಚಾಗುತ್ತಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸರ್ವೇ ಒಂದರ ಪ್ರಕಾರ ಇತ್ತೀಚೆಗೆ ಭಾರತದಲ್ಲಿ ಕೊಲೆಗೀಡಾಗುವವರ ಸಂಖ್ಯೆಗಿಂತ ಆತ್ಮಹತ್ಯೆ ಮಾಡಿಕೊಳ್ಳುವವರು ಐದು ಪಟ್ಟು ಹೆಚ್ಚಾಗಿದ್ದಾರಂತೆ. ಅದರಲ್ಲೂ ಕೇರಳದಲ್ಲಿ ಒಬ್ಬರು ಕೊಲೆಯಾದರೆ ಇಪ್ಪತ್ತೇಳು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರಂತೆ. ಆದ್ರೆ ಬಿಹಾರದಲ್ಲಿ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವವರಿಗಿಂತ ಕೊಲೆಗೀಡಾಗುವವರೇ ಹೆಚ್ಚಾಗಿದ್ದಾರೆ.
ಭಾರತ ಅಷ್ಟೇ ಅಲ್ಲ. ಪ್ರಪಂಚದ ಬಹುತೇಕ ದೇಶಗಳ ಪರಿಸ್ಥಿತಿ ಕೂಡಾ ಹೀಗೆಯೇ ಇದೆ ಎಂದು ವರದಿ ಹೇಳುತ್ತದೆ. ಲ್ಯಾಟಿನ್ ಅಮೆರಿಕ ಬಿಟ್ಟು ಉಳಿದೆಲ್ಲಾ ದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚಿದೆ. ಕೊರೊನಾ ಬಂದ ಮೇಲೆ ತುಂಬಾ ಜನ ಆರ್ಥಿಕ ತೊಂದರೆಗೊಳಗಾಗಿದ್ದಾರೆ. ಇದರಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ. ಆರ್ಥಿಕ ಸಮಸ್ಯೆ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಇದು ಕೌಟುಂಬಿಕ ಕಲಹಗಳಿಗೂ ದಾರಿ ಮಾಡಿಕೊಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಕಂಗೆಟ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಸಮೀಕ್ಷೆಯ ಪ್ರಕಾರ ಯುವ ಸಮುದಾಯವೇ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದೆ. ನೇಣು ಬಿಗಿದುಕೊಂಡು ಕೆಲವರು ಸಾವನ್ನಪ್ಪಿದೆ, ರೈಲಿಗೆ ತಲೆ ಕೊಟ್ಟು ಕೆಲವರು ಸಾವನ್ನಪ್ಪಿದ್ದಾರೆ. ವಿಷಯ ಸೇವಿಸಿ, ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದವರೂ ಇದ್ದಾರೆ.