National

110 ರೂಪಾಯಿ ಮುಟ್ಟಿದ ಪೆಟ್ರೋಲ್‌ ದರ; ಡೀಸೆಲ್‌ ಬೆಲೆಯೂ ಏರಿಕೆ

ನವದೆಹಲಿ: ಎರಡು ವಾರಗಳಿಂದ ಸತತವಾಗಿ ಪೆಟ್ರೋಲ್‌ ಡೀಸೆಲ್‌ ದರ ಏರಿಕೆಯಾಗುತ್ತಲೇ ಇದೆ. ಇವತ್ತೂ ಕೂಡಾ ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರ್‌ಗೆ 40 ಪೈಸೆ ಏರಿಕೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 109.41 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 93.23 ರೂಪಾಯಿ ಆಗಿದೆ. 

ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್‌ಗೆ 117.68 ರೂಪಾಯಿ ಇದ್ದರೆ, ಡೀಸೆಲ್ ದರ 103.75 ರೂಪಾಯಿ ಆಗಿದೆ. ಕೇರಳದಲ್ಲಿ ಲೀಟರ್ ಪೆಟ್ರೋಲ್​ಗೆ 115.34 ರೂಪಾಯಿ, ಲೀಟರ್ ಡೀಸೆಲ್ ಬೆಲೆ 102.16 ರೂಪಾಯಿ ಆಗಿದೆ. ದೆಹಲಿಯಲ್ಲಿಂದು ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ ₹ 103.81 ಮುಟ್ಟಿದೆ. ಲೀಟರ್ ಡೀಸೆಲ್ ಬೆಲೆ ₹ 95.07 ತಲುಪಿದೆ.

ಮಾರ್ಚ್ 22ರಂದು ಬೆಲೆ ಏರಿಕೆ ಶುರುವಾಯಿತು. ಅಂದಿನಿಂದ ಒಂದು ದಿನ ಮಾತ್ರ ಏರಿಕೆಯಾಗಿಲ್ಲ. ಅದು ಬಿಟ್ಟರೆ ಪ್ರತಿದಿನವೂ 30 ಪೈಸೆಯಿಂದ 80 ಪೈಸೆವರೆಗೂ ಏರಿಕೆಯಾಗುತ್ತಲೇ ಬಂದಿದೆ.  ಇದುವರೆಗೆ ಲೀಟರ್‌ಗೆ 8 ರೂಪಾಯಿ 40 ಪೈಸೆವರೆಗೂ ಏರಿಕೆಯಾಗಿದೆ.

 

Share Post