National

ಹಿಂದೂ ಯುವಕನನ್ನು ಮದುವೆಯಾಗಲು ಮತಾಂತರವಾದ ಯುವತಿ

ಬರೇಲಿ; ಹಿಂದೂ ಯುವಕನನ್ನು ಮದುವೆಯಾಗಲು ಮುಸ್ಲಿಂ ಯುವತಿ ಹಿಂದೂ ಮತಕ್ಕೆ ಬದಲಾಗಿದ್ದಾಳೆ.. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಯುಕ್ತಿ ಫರಾನಾ ಎಂಬ ಯುವತಿ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದು ಆತನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ.

  ಹಿಂದೂ ಧರ್ಮಕ್ಕೆ ಮತಾಂತರವಾದ ಮೇಲೆ ಯುಕ್ತಿ ಫರಾನಾ ತನ್ನ ಹೆಸರನ್ನು ಪಲ್ಲವಿ ಎಂದು ಬದಲಿಸಿಕೊಂಡಿದ್ದಾಳೆ.

  19 ವರ್ಷದ ಫರಾನಾ ಹಾಗೂ ಧರಂವೀರ್ ಇಬ್ಬರು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನಿವಾಸಿಗಳು. ಆರು ತಿಂಗಳ ಹಿಂದೆ ಚಂಡೀಗಢದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಪರಿಚಯವಾಗಿದ್ದರು. ನಂತರ ಅದು ಪ್ರೀತಿಗೆ ತಿರುಗಿತ್ತು.

 

Share Post