ಫ್ಯಾಮಿಲಿಗೆ ಇಷ್ಟ ಇಲ್ಲದಿದ್ರೂ ನಾನು ಇದೇ ಮಾಡ್ತೀನಿ ಅಂತಿದ್ದಾರಂತೆ ನಟಿ ನಿಹಾರಿಕಾ
ಹೈದರಾಬಾದ್; ಮೆಗಾ ಫ್ಯಾಮಿಲಿಯ ನಟಿ ನಿಹಾರಿಕಾ ಇತ್ತೀಚೆಗೆ ಡಿವೋರ್ಸ್ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಅವರು ಮತ್ತೆ ಸುದ್ದಿಯಾಗುತ್ತಿದ್ದಾರೆ. ಯಾಕಂದ್ರೆ ಅವರು ಮತ್ತೆ ನಟನೆಗೆ ಮರಳುತ್ತಿದ್ದಾರಂತೆ. ಹೀರೋಯಿನ್ ಆಗಿ ಮತ್ತೆ ಚಿತ್ರರಂಗ ಎಂಟ್ರಿ ಕೋಡೋಕೆ ಅವರು ಸಿದ್ಧತೆ ನಡೆಸಿದ್ದಾರೆ. ಮೆಗಾ ಫ್ಯಾಮಿಲಿಗೆ ಇದು ಇಷ್ಟವಿಲ್ಲವಂತೆ. ಹೀಗಿದ್ದರೂ, ಫ್ಯಾಮಿಲಿಯನ್ನೂ ಲೆಕ್ಕಿಸದೇ ನಿಹಾರಿಕಾ ಸಿನಿಮಾಗೆ ಎಂಟ್ರಿ ಕೊಡೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಿಹಾರಿಕಾಗೆ ಎರಡು ವರ್ಷದ ಹಿಂದೆ ಚೈತನ್ಯ ಜೊತೆ ವಿವಾಹವಾಗಿದ್ದರು. ಆದ್ರೆ, ಇಬ್ಬರ ಮಧ್ಯೆ ವೈಮನಸ್ಯದಿಂದಾಗಿ ಇಬ್ಬರೂ ಬೇರೆಯಾಗಿದ್ದು, ಡಿವೋರ್ಸ್ ಕೂಡಾ ತೆಗೆದಯಕೊಂಡಿದ್ದಾರೆ. ಇದೀಗ ನಿಹಾರಿಕಾ ನಟನೆಗೆ ಮರಳುತ್ತೇನೆ ಎನ್ನುತ್ತಿದ್ದಾರೆ. ಅಂದಹಾಗೆ ನಿಹಾರಿಕಾ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಆದ್ರೆ ಈಗ ಅವರು ನಟನೆ ಮಾಡುತ್ತೇನೆ ಎನ್ನುತ್ತಿದ್ದಾರೆ.
ಈ ಹಿಂದೆ ನಿಹಾರಿಕಾ ಅವರು ಒಕ ಮನಸು, ಸೂರ್ಯಕಾಂತಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದರು. ಆದ್ರೆ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಕ್ಕಿಲ್ಲ. ಇದೀಗ ಮತ್ತೆ ಅವರು ನಟನೆ ಮಾಡುತ್ತೇನೆ ಎಂದು ಹೇಳುತ್ತಿದ್ದು, ನಿಹಾರಿಕಾಗೆ ನಿರ್ದೇಶನ ಮಾಡಲು ಒಬ್ಬರು ನಿರ್ದೇಶಕರು ಕೂಡಾ ರೆಡಿಯಾಗಿದ್ದಾರಂತೆ.