ತೆಲಂಗಾಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಎಲ್ಲರೂ ಪಾಸ್
ತೆಲಂಗಾಣ: ತೆಲಂಗಾಣದ ಪಿಯುಸಿ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಫೇಲಾದ ಶೇ.51% ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಪಿಯುಸಿ ಪರೀಕ್ಷೆಯಲ್ಲಿ ಕೇವಲ 49% ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದು, ಉಳಿದವರು ಅನುತ್ತೀರ್ಣರಾಗಿದ್ದರು. ಇದಕ್ಕೆ ತೆಲಂಗಾಣ ರಾಜ್ಯಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ರು.
ಕೊರೊನಾ ಸಮಯದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ, ಪುಸ್ತಕ, ನೋಟ್ಸ್ ಇಲ್ಲದೆ, ಅರ್ಧಂಬರ್ಧ ಪಾಠ ಕೇಳಿ ಪರೀಕ್ಷೆ ಬರೆಯುವುದು ಹೇಗೆ? ಅದರಲ್ಲೂ ಈಗ ಫೇಲ್ ಮಾಡಿದ್ರೆ ಅದರ ನೇರ ಹೊಣೆ ಸರ್ಕಾರವೇ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದೆಲ್ಲದರ ಜೊತೆಗೆ ಫೇಲ್ ಆಗಿದ್ದಕ್ಕೆ ಮನನೊಂದು ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ರು. ಜಾಹ್ನವಿ ಹಾಗೂ ಧನುಷ್ ಅನುತ್ತೀರ್ಣರಾಗಿದ್ದಕ್ಕೆ ಮನೆಯಲ್ಲಿ ವಿಷಯ ತಿಳಿಸಿ, ಮನನೊಂದು ರೈಲಿಗೆ ತಲೆ ಕೊಟ್ಟಿದ್ರು.
ಇದೆಲ್ಲದಕ್ಕೂ ಸರ್ಕಾರವೇ ಹೊಣೆ ಎಂದು ಹೆತ್ತವರು ಆರೋಪ ಮಾಡಿದ್ರು. ಇದಕ್ಕೆ ಫುಲ್ ಸ್ಟಾಪ್ ಇಡಲು ಮೊದಲ ಪಿಯುಸಿ ವಿದ್ಯಾರ್ಥಿಗಳನ್ನು ಕನಿಷ್ಟ ಮಾರ್ಕ್‌ಗಳನ್ನು ಕೊಟ್ಟು ಪಾಸ್ ಮಾಡಿರುವುದಾಗಿ ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ತೆಲಂಗಾಣ ವಿದ್ಯಾರ್ಥಿಗಳು ಮತ್ತು ಪೋಷಕರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.