NationalPolitics

ದೇಶಕ್ಕೆ ಮೋದಿಯೇ ಗ್ಯಾರೆಂಟಿ; ದೇಶಾದ್ಯಂತ ಟ್ರೆಂಡಿಂಗ್‌

ನವದೆಹಲಿ; ಇಂದು ನಾಲ್ಕು ರಾಜ್ಯಗಳ ಮತ ಎಣಿಕೆ ನಡೆಯುತ್ತಿದೆ. ಇದರಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಈ ನಡುವೆ ಒಂದು ವಾಕ್ಯ ಹೆಚ್ಚು ಟ್ರೆಂಡಿಂಗ್‌ ಆಗುತ್ತಿದೆ. ದೇಶಕ್ಕೆ ಮೋದಿಯೇ ಗ್ಯಾರೆಂಟಿ ಎಂಬ ಪೋಸ್ಟರ್‌ ಎಲ್ಲೆಡೆ ಪ್ರಚಾರ ಪಡೆದುಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಹೀಗಾಗಿ ಎಲ್ಲಾ ರಾಜ್ಯಗಳಲ್ಲೂ ಇದೇ ಅಸ್ತ್ರ ಪ್ರಯೋಗಿಸಿತ್ತು. ಈ ನಡುವೆಯೂ ಉತ್ತರ ಭಾರತದಲ್ಲಿ ಈಗಲೂ ಮೋದಿ ಮ್ಯಾಜಿಕ್‌ ವರ್ಕೌಟ್‌ ಆಗಿದೆ. ಹೀಗಾಗಿ ಬಿಜೆಪಿ ನಾಯಕರು ದೇಶಕ್ಕೆ ಮೋದಿಯೇ ಗ್ಯಾರೆಂಟಿ ಎಂದು ಹೇಳುತ್ತಿದ್ದಾರೆ.

 

Share Post