Districts

53 ದಿನಗಳಿಂದ ಜಲಾಶಯ ಭರ್ತಿ – ದಾಖಲೆ ಸೃಷ್ಠಿಸಿದ K R S

ಮಂಡ್ಯ : ಕನ್ನಡ ನಾಡಿನ ಜೀವನದಿ ಕಾವೇರಿಯ KRS ಜಲಾಶಯ ೯೦ ವರ್ಷಗಳಲ್ಲಿ ಹಿಂದೆಂದೂ ಆಗದ ದಾಖಲೆಯೊಂದನ್ನು ಮಾಡಿದೆ. ಸತತವಾಗಿ 53 ದಿನಗಳ ಕಾಲ ಸಂಪೂರ್ಣ ತುಂಬಿ ಹರಿಯುವ ಮೂಲಕ ಕೆಆರ್‌ಎಸ್‌ ದಾಖಲೆ ನಿರ್ಮಿಸಿದೆ.

ಕಳೆದ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಬಿದ್ದ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಈ ಕಾರಣ ೯೦ ವರ್ಷಗಳಲ್ಲಿ ಆಗಿರದ ಸಾಧನೆ ಈಗ ಆಗಿದೆ. ಸತತ ೫೩ ದಿನಗಳು ಕೆ.ಆರ್.‌ಎಸ್‌ ತುಂಬಿ ಹರಿದಿದ್ದು ೯೦ ವರ್ಷಗಳ ಹಿಂದೆ. ಈಗ ಈ ದಾಖಲೆಯನ್ನು ಸರಿಗಟ್ಟಿದೆ.

ಅಕ್ಟೋಬರ್‌ ೨೯ರಿಂದ ಡಿಸೆಂಬರ್‌ ೨೩ರ ವರೆಗೂ ಸಂಪೂರ್ಣ ಭರ್ತಿಯಾಗಿತ್ತು. ಸತತ ೫೩ ದಿನಗಳು ಕೂಡ ಗರಿಷ್ಠ ಮಟ್ಟವಾದ ೧೨೪.೮೦ ಅಡಿಯಷ್ಟು ನೀರು ಇತ್ತು. ಈ ದಾಖಲೆಯಿಂದ ಬೇಸಿಗೆಯಲ್ಲಿ ಚಿಂತಿಸುವ ಅಗತ್ಯ ಇಲ್ಲದಂತಾಗಿದೆ.

Share Post