ನವದೆಹಲಿಯಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲು
ನವದೆಹಲಿ; ದೆಹಲಿ ಸುತ್ತಮುತ್ತ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದ್ದು, ನೇಪಾಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಮನೆ, ಕಚೇರಿಗಳಲ್ಲಿದ್ದ ವಸ್ತುಗಳು ಕೆಲ ಸೆಕೆಂಡ್‌ಗಳು ಕಾಲ ಅಲುಗಾಡಿದ್ದು, ಜನ ಭಯಭೀತರಾಗಿದ್ದಾರೆ.
ಮಧ್ಯಾಹ್ನ 2.52ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ದೆಹಲಿ, ಪಂಜಾಬ್, ಹರಿಯಾಣ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ನೋಯ್ಡಾದಲ್ಲೂ ಕಂಪನದ ಅನುಭವವಾಗಿದೆ. ವಸ್ತುಗಳು ಅಲುಗಾಡಿದ್ದರಿಂದಾಗಿ ಜನರು ಭಯಭೀತರಾಗಿದ್ದಾರೆ. ಬಹುತೇಕ ಕಡೆ ಜನ ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.