CrimeNational

50 ಸಾವಿರದಿಂದ 5.5 ಲಕ್ಷಕ್ಕೆ 16 ಮಕ್ಕಳ ಮಾರಾಟ; ಮಕ್ಕಳ ಮಾರಾಟ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ..?

ಹೈದರಾಬಾದ್; ಒಟ್ಟು 16 ಮಕ್ಕಳು.. ಎಲ್ಲರೂ ನವಜಾತ ಶಿಶುಗಳಿಂದ ಹಿಡಿದು 1 ವರ್ಷದೊಳಗಿನ ಮಕ್ಕಳು… ಎಲ್ಲರನ್ನೂ ಪ್ರಾಣಿಗಳನ್ನು ಮಾರಾಟ ಮಾಡಿದಂತೆ ಮಾರಾಟ ಮಾಡಲಾಗಿದೆ.. ಅಂತಾರಾಜ್ಯ ಮಕ್ಕಳ ಮಾರಾಟ ಗ್ಯಾಂಗ್‌ ವ್ಯವಸ್ಥಿತವಾಗಿ ಮಕ್ಕಳ ಮಾರಾಟ ದಂಧೆ ನಡೆಸುತ್ತಿದ್ದು, ತೆಲಂಗಾಣ ಪೊಲೀಸರು ಈ ಗ್ಯಾಂಗ್‌ಗೆ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..

ತೆಲಂಗಾಣದ ರಾಚಕೊಂಡ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಮೇಡಿಪಲ್ಲಿಯಲ್ಲಿ ಪೊಲೀಸರು ಈ ಮಕ್ಕಳ ಮಾರಾಟ ಗ್ಯಾಂಗ್‌ ಅನ್ನು ಅರೆಸ್ಟ್‌ ಮಾಡಿದ್ದು, ಒಟ್ಟು 16 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.. 4 ದಿನದ ಹಿಂದೆ ಪೀರ್ಜಾಡಿಗುಡ್ಡದಲ್ಲಿ ಡಾ.ಶೋಭಾರಾಣಿ ಎನ್ನುವವರು ಶಿಶುವೊಂದನ್ನು ನಾಲ್ಕೂವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಿ ಸಿಕ್ಕಿ ಹಾಕಿಕೊಂಡಿದ್ದರು.. ಆಕೆ ನೀಡಿ ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಗಳ ಬೆನ್ನುಹತ್ತಿದ್ದರು.. ಅನಂತರ ಮತ್ತಿಬ್ಬರನ್ನು ಬಂಧಿಸಲಾಯಿತು.. ಹೀಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಏಜೆಂಟರು, ಸಬ್‌ ಏಜೆಂಟರು ಸೇರಿ ಒಟ್ಟು ಎಂಟು ಮಂದಿಯನ್ನು ಅರೆಸ್ಟ್‌ ಮಾಡಲಾಗಿದೆ.. ಇದರಲ್ಲಿ ಪ್ರಮುಖ ಆರೋಪಿಗಳಾದ ಶೋಭಾರಾಣಿ, ಸಲೀಂ ಮತ್ತು ಸ್ವಪ್ನಾ ಕೂಡಾ ಅಂದರ್‌ ಆಗಿದ್ದಾರೆ..

ಇವರೆಲ್ಲಾ ಸೇರಿ ಮಕ್ಕಳನ್ನು 50 ಸಾವಿರ ರೂಪಾಯಿಯಿಂದ ಹಿಡಿದು 5.50 ಲಕ್ಷ ರೂಪಾಯಿಯವರೆಗೂ ಮಾರಾಟ ಮಾಡಿದ್ದಾರೆ.. ರಾಚಕೊಂಡ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನವಜಾತ ಶಿಶುಗಳನ್ನು ಹೆಚ್ಚಾಗಿ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.. ಈ ಗ್ಯಾಂಗ್‌ ಒಟ್ಟು 16 ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ್ದು, ಈಗ ಎಲ್ಲಾ ಮಕ್ಕಳನ್ನೂ ರಕ್ಷಣೆ ಮಾಡಲಾಗಿದೆ..

ದೆಹಲಿ ಮತ್ತು ಪುಣೆ ಮುಂತಾದ ಕಡೆಯಿಂದಲೂ ಮಕ್ಕಳನ್ನು ತರಲಾಗುತ್ತಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ.. ಅಲ್ಲಿನ ಗ್ಯಾಂಗ್‌ಗಳಿಗಾಗಿ ಬಲೆ ಬೀಸಲಾಗಿದೆ..

Share Post