ತಿನ್ನೋ ಹಣ್ಣು ಎಂದು ವಿಷಕಾರಿ ಹಣ್ಣು ಸೇವನೆ; ಮಹಿಳೆ ಸೇವನೆ
ಮಂಗಳೂರು; ಕಾಡಿನಲ್ಲಿ ಸಿಕ್ಕ ಹಣ್ಣನ್ನು ತಿನ್ನೋ ಹಣ್ಣೆಂದು ತಪ್ಪು ತಿಳಿದು ಜ್ಯೂಸ್ ಮಾಡಿಕೊಂಡು ಕುಡಿದಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಸುಳ್ಯ ತಾಲ್ಲೂಕಿನ ಬೆಳ್ಳಾರೆ ಸಮೀಪದ ಶೇಣಿಯ ಕುಳ್ಳಾಜೆ ನಿವಾಸಿ ಲೀಲಾವತಿ ಸಾವನ್ನಪ್ಪಿರುವ ಮಹಿಳೆ.
ವಾರದ ಹಿಂದೆ ಮೈರೋಲ್ ಹಣ್ಣು ಎಂದು ಕಾಡಿನಿಂದ ಹಣ್ಣುಗಳನ್ನೂ ಕಿತ್ತುತಂದಿದ್ದರು. ಮೈರೋಲ್ ಹಣ್ಣು ತಿನ್ನುವ ಹಣ್ಣಾಗಿದ್ದು, ಜ್ಯೂಸ್ ತುಂಬಾ ಚೆನ್ನಾಗಿರುತ್ತದೆ. ಹೀಗಾಗಿ ಅದೇ ತರಾ ಇದ್ದ ಹಣ್ಣನ್ನು ಮೈರೋಲ್ ಎಂದು ತಿಳಿದು ಕಿತ್ತುಕೊಂಡು ಬಂದಿದ್ದರು. ಆದ್ರೆ ಅದು ವಿಷಕಾರಿ ಹಣ್ಣಾಗಿದೆ.
ವಾರದ ಹಿಂದೆ ಲೀಲಾವತಿ ಹಾಗೂ ಅವರ ತಂದೆ ಈ ವಿಷಕಾರಿ ಹಣ್ಣಿನ ಜ್ಯೂಸ್ ಮಾಡಿ ಕುಡಿದಿದ್ದರು. ಅನಂತರ ಅವರಿಬ್ಬರ ಆರೋಗ್ಯದಲ್ಲಿ ಏರುಪೇರಾಗಿತ್ತು. ವಾರದ ನಂತರ ಲೀಲಾವತಿ ಸಾವನ್ನಪ್ಪಿದ್ದಾರೆ. ಲೀಲಾವತಿಯವರ ತಂದೆಯವರ ಆರೋಗ್ಯ ಕೂಡಾ ಹದಗೆಟ್ಟಿದೆ ಎನ್ನಲಾಗಿದೆ.