National

ಜನವರಿ 27ಕ್ಕೆ ರಾಹುಲ್‌ ಗಾಂಧಿ ಪಂಜಾಬ್‌ ಪ್ರವಾಸ‌ : ಸಿಧು ಟ್ವೀಟ್

ಪಂಜಾಬ್:‌ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಬಿಸಿ ಶುರುವಾಗಿದೆ. ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್ ಪಕ್ಷವೂ ಅದೇ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದೆ. ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನವರಿ 27ರಂದು ಪಂಜಾಬ್ ಗೆ ಭೇಟಿ ನೀಡಲಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

”ನಮ್ಮ ನಾಯಕ ರಾಹುಲ್ ಗಾಂಧಿ ಇದೇ ತಿಂಗಳ 27ರಂದು ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಅವರನ್ನು ಸ್ವಾಗತಿಸಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ’ ಎಂದು ಸಿಧು ಟ್ವೀಟ್ ಮಾಡಿದ್ದಾರೆ. ಜನವರಿ 27, ಗುರುವಾರದಂದು ವಿಶೇಷ ವಿಮಾನದಲ್ಲಿ ದೆಹಲಿಯಿಂದ ರಾಹುಲ್ ಗಾಂಧಿ ಪಂಜಾಬ್‌ಗೆ ಬರಲಿದ್ದಾರೆ. ವಿಮಾನ ನಿಲ್ದಾಣದಿಂದ  117 ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ರಾಹುಲ್ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆ.  ಮೊದಲಿಗೆ ಅಮೃತಸರದಲ್ಲಿರುವ  ಹರ್ಮಂದಿರ್ ಸಾಹಿಬ್‌ಗೆ ತೆರಳುತ್ತಾರೆ.

ಅಲ್ಲಿಂದ ನೇರವಾಗಿ  ಶ್ರೀದುರ್ಗಾಯ ಮಂದಿರ ಮತ್ತು ವಾಲ್ಮೀಕಿ ಸಮುದ್ರ ತೀರಕ್ಕೆ ರಾಹುಲ್ ಭೇಟಿ ನೀಡ, ವಿಶೇಷ ಪೂಜೆ ಸಲ್ಲಿಸಲ್ಲಿದ್ದಾರೆ. ದರ್ಶನದ ನಂತರ ಮತ್ತೆ ರಸ್ತೆ ಮಾರ್ಗವಾಗಿ ಜಲಂಧರಕ್ಕೆ ಭೇಟಿ ಕೊಟ್ಟು, ವರ್ಚುವಲ್ ರ್ಯಾಲಿಯಲ್ಲಿ ಪಾಲ್ಗೊಳುತ್ತಾರೆ. ರ್ಯಾಲಿ ಮುಗಿದ ಬಳಿಕ ಜಲಂಧರ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸಾಗುವುದಾಗಿ ಸಿಧು ತಿಳಿಸಿದ್ದಾರೆ.

 

Share Post