LifestyleNational

ಮಗುವಿನ ನಿರೀಕ್ಷೆಯಲ್ಲಿದ್ದಾಳೆ ಪಾಕಿಸ್ತಾನದಿಂದ ಬಂದ ಸೀಮಾ ಹೈದರ್‌

ನೋಯ್ಡಾ; ಭಾರತೀಯ ಯುವಕನೊಂದಿಗೆ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿ ಗಂಡನನ್ನು ಬಿಟ್ಟು ಪಾಕಿಸ್ತಾನದಿಂದ ಬಂದಿದ್ದ ಸೀಮಾ ಹೈದರ್‌ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಈಗಾಗಲೇ ಸೀಮಾ ಹೈದರ್‌ ನಾಲ್ಕು ಮಕ್ಕಳ ತಾಯಿ. ಕೆಲ ತಿಂಗಳ ಹಿಂದೆ ಆಕೆ ಪಾಕಿಸ್ತಾನವನ್ನು ತೊರೆದು ತನ್ನ ಸೋಷಿಯಲ್‌ ಮೀಡಿಯಾ ಸ್ನೇಹಿತನನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ಗಳು. ನೋಯ್ಡಾದಲ್ಲಿರುವ ತನ್ನ ಬಾಯ್‌ಫ್ರೆಂಡ್‌ ಜೊತೆಯೇ ಈಗ ಸೀಮಾ ಹೈದರ್‌ ಸಂಸಾರ ನಡೆಸುತ್ತಿದ್ದು, ಆಕೆ ಗರ್ಭಿಯಾಗಿದ್ದಾಳೆ ಎಂದು ತಿಳಿದುಬಂದಿದೆ. 

ಸಚಿನ್‌ ಎಂಬ ಯುವಕನ ಜೊತೆ ಸಂಸಾರ ನಡೆಸುತ್ತಿರುವ ಸೀಮಾ ಹೈದರ್‌ ತಾನ ತಾಯಿಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಶೀಘ್ರವೇ ನಾನು ತಾಯಿಯಾಗಲಿದ್ದೇನೆ ಎನ್ನುವ ಮೂಲಕ ಹೊಸ ವರ್ಷಕ್ಕೆ ಹೊಸ ಸುದ್ದಿ ಕೊಟ್ಟಿದ್ದಾಳೆ. ಗಂಡು ಮಗುವಿನ ನಿರೀಕ್ಷೆಯಲ್ಲಿರುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ.

Share Post