CinemaNational

ಜಪಾನ್‌ನಲ್ಲಿ 155 ಬಾರಿ ಭೂಕಂಪನ; ಸೇಫಾಗಿ ಭಾರತಕ್ಕೆ ಬಂದ ನಟ ಜ್ಯೂ. ಎನ್‌ಟಿಆರ್‌

ಜಪಾನ್‌; ಹೊಸ ವರ್ಷದ ಮೊದಲ ದಿನವೇ ಜಪಾನ್‌ ಜನಕ್ಕೆ ತೀವ್ರ ಆಘಾತವಾಗಿದೆ. ಒಂದೇ ದಿನದಲ್ಲಿ 155 ಬಾರಿ ಭೂಮಿ ಕಂಪಿಸಿದೆ. ಇದರಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಇದೇ ವೇಳೆ ತೆಲುಗಿನ ಖ್ಯಾತ ನಟ ಜ್ಯೂ.ಎನ್‌ಟಿಆರ್‌ ಕೂಡಾ ಜಪಾನ್‌ನಲ್ಲೇ ಇದ್ದರು. ಹೀಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು. ಆದ್ರೆ ಅವರು ಸೇಫಾಗಿದ್ದು, ಭಾರತಕ್ಕೆ ಹಿಂತಿರುಗಿದ್ದಾರೆ.

ಈ ಬಗ್ಗೆ ಎನ್‌ಟಿಆರ್‌ ಅವರೇ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ನಾನು ಒಂದು ವಾರದಿಂದ ಜಪಾನ್‌ನಲ್ಲಿ ಕಾಲ ಕಳೆದಿದ್ದೇನೆ. ಇವತ್ತು ನಾನು ಮನೆಗೆ ವಾಪಸ್‌ ಆಗಿದ್ದೇನೆ. ಭೂಕಂಪವಾಗಿರುವುದು ನೋಡಿ ನನಗೆ ಫುಲ್‌ ಶಾಕ್‌ ಆಗಿದೆ ಎಂದು ಎನ್‌ಟಿಆರ್‌ ಹೇಳಿಕೊಂಡಿದ್ದಾರೆ. ಅಲ್ಲಿನ ಜನರು ಆದಷ್ಟು ಬೇಗ ಚೇತರಿಸಿಕೊಳ್ಳಬೇಕು. ಜನ ಜೀವನ ಸಹಜ ಸ್ಥಿತಿಗೆ ಮರಳಲು ನಾನು ಪ್ರಾರ್ಥಿಸುತ್ತೇನೆ ಎಂದೂ ಎನ್‌ಟಿಆರ್‌ ಹೇಳಿಕೊಂಡಿದ್ದಾರೆ.

 

Share Post