CrimeNational

ನಟಿ ರಿಯಾ ಕುಮಾರಿ ಮರ್ಡರ್‌ ಕೇಸ್‌; ಪತಿ ಪ್ರಕಾಶ್‌ ಕುಮಾರ್‌ ಅರೆಸ್ಟ್‌

ರಾಂಚಿ; ಪಶ್ಚಿಮ ಬಂಗಾಳದ ಹೌರಾದಲ್ಲಿ ಇತ್ತೀಚೆಗೆ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಜಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ ಹತರಾಗಿದ್ದರು. ಈ ಪ್ರಕರಣ ಸಂಬಂಧ ರಿಯಾ ಕುಮಾರಿ ಗಂಡ ಪ್ರಕಾಶ್ ಕುಮಾರ್ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ರಾಂಚಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಈ ದುರ್ಘಟನೆ ನಡೆದಿತ್ತು. ಆದ್ರೆ, ಪತಿ ಪ್ರಕಾಶ್‌ ಕುಮಾರ್‌ ಅವರು ಹೆದ್ದಾರಿ ದರೋಡೆಕೋರರು ಗುಂಡು ಹಾರಿಸಿದ್ದರಿಂದ ತಮ್ಮ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಹೇಳಿಕೊಂಡಿದ್ದರು. ಶೌಚಕ್ಕೆಂದು ಕಾರು ನಿಲ್ಲಿಸಲಾಗಿತ್ತು. ಈ ವೇಳೆ ಮೂವರು ವ್ಯಕ್ತಿಗಳು ನಮ್ಮ ಬಳಿ ಇದ್ದ ನಗ ನಾಣ್ಯ ದೋಚಲು ಯತ್ನಿಸಿದರು. ರಿಯಾ ದರೋಡೆಕೋರರ ವಿರುದ್ಧ ತಿರುಗಿಬಿದ್ದಳು. ಈ ವೇಳೆ ಅವರು ಗುಂಡು ಹಾರಿಸಿದರು ಎಂದು ಬಂಧಿತ ಪ್ರಕಾಶ್‌ ಕುಮಾರ್‌ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.

ಪ್ರಕಾಶ್‌ ನೀಡಿರುವ ದೂರಿನ ಆಧಾರದ ಮೇಲೆಯೇ ಪೊಲೀಸರು ಕೇಸ್‌ ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಪ್ರಕಾಶ್‌ ಕುಮಾರ್‌ ಅವರನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ಕೂಡಾ ಮಾಡಲಾಗಿದೆ.

 

Share Post