National

ಬ್ಯಾಂಕ್‌ ಗ್ರಾಹಕರೇ ಎಚ್ಚರ….

  ದೆಹಲಿ: ಭಾರತದ  2 ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿದ್ದಕ್ಕೆ ಬ್ಯಾಂಕ್‌ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.ಇದೇ ತಿಂಗಳು 16  ಮತ್ತು 17 ರಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಉದ್ಯೋಗಿಗಳು ಮುಷ್ಕರ ಮಾಡಲಿದ್ದಾರೆ. ಎರಡು ದಿನಗಳ ಕಾಲ ರಾಷ್ಟ್ರ ವ್ಯಾಪಿ ಮುಷ್ಕರವನ್ನು ನಡೆಸಲಿದ್ದು, ಪ್ರತಿಭಟನೆಗೆ ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್ಸ್‌ ಕರೆ ನೀಡಿದೆ. ಇನ್ನು ಮುಷ್ಕರದ ಅವಧಿಯಲ್ಲಿ ಬ್ಯಾಂಕ್‌ ತನ್ನ ಶಾಖೆಗಳು ಮತ್ತು ಕಚೇರಿಗಳಲ್ಲಿ ಎಂದಿನಂತೆ ಕಾರ್ಯನಿರ್ವಹಣೆ ನಡೆಸಲಿವೆ. ಆದರೆ ಪ್ರತಿಭಟನೆಯಲ್ಲಿ ಸಿಬ್ಬಂದ್ದಿ ಭಾಗಿಯಾಗುವುದರಿಂದ ಬ್ಯಾಂಕ್‌ ಸೇವೆಯಲ್ಲಿ ಕೊಂಚ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

Share Post