CrimeNational

ರೇಪ್‌ ಕೇಸ್ ವಾಪಸ್‌ ಪಡೆಯದಿದ್ದಕ್ಕೆ ಮೇಕಪ್‌ ಆರ್ಟಿಸ್ಟ್‌ ಕೊಲೆ..!

ಮುಂಬೈ; ಐದು ವರ್ಷ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ವ್ಯಕ್ತಿ, ತನ್ನ ಪಾರ್ಟನರ್‌ ಮದುವೆಯಾಗು ಎಂದು ಪೀಡಿಸಿದಾಗ ಆತ ನೋ ಎಂದಿದ್ದಾನೆ. ಹೀಗಾಗಿ ಆಕೆ ಆತನ ವಿರುದ್ಧ ರೇಪ್‌ ಕೇಸ್‌ ಹಾಕಿದ್ದಾಳೆ. ಅದನ್ನು ವಾಪಸ್‌ ಪಡೆಯಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿ ನೀರಿಗೆ ಎಸೆಯಲಾಗಿದೆ. ಇದಕ್ಕೆ ಆರೋಪಿ ಪತ್ನಿ ಕೂಡಾ ಸಾಥ್‌ ನೀಡಿದ್ದಾಳೆ. ಮುಂಬೈನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 

ಚಿತ್ರರಂಗದಲ್ಲಿ ಮೇಕಪ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ ನೈನಾ ಮಹತ್‌ ಅವರೇ ಕೊಲೆಯಾದ ದುರ್ದೈವಿ. ಕಾಸ್ಟ್ಯೂಮ್ ಡಿಸೈನರ್ ಆಗಿರುವ ಮನೋಹರ್ ಶುಕ್ಲಾ ಜೊತೆ ಈಕೆ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದಳು. ಇತ್ತೀಚೆಗೆ ನೈನಾ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದ್ರೆ ಶುಕ್ಲಾಗೆ ಈಗಾಗಲೇ ಮದುವೆಯಾಗಿದ್ದರಿಂದ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದಾಗಿ ನೈನಾ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಕೇಸ್‌ ದಾಖಲಿಸಿದ್ದಳು. ನಂತರ ಶುಕ್ಲಾ ಕೇಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ನೈನಾ ಒಪ್ಪಿಲ್ಲ. ಹೀಗಾಗಿ ನೈನಾಳನ್ನು ಕೊಲೆ ಮಾಡಲಾಗಿದ್ದು, ಸೂಟ್‌ಕೇಸ್‌ನಲ್ಲಿ ದೇಹ ತುಂಬಿ ಅದನ್ನು ನೀರಿಗೆ ಎಸೆಯಲಾಗಿದೆ.

ಇದಕ್ಕೆ ಶುಕ್ಲಾ ಪತ್ನಿ ಕೂಡಾ ಸಾಥ್‌ ನೀಡಿದ್ದಾಳಂತೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Share Post