ನಾಳೆ ಬೆಳಗಾವಿ ಬಂದ್‌ಗೆ ಎಂಇಎಸ್ ಕರೆ
ಬೆಳಗಾವಿ: ಎಂಇಎಸ್ ಖ್ಯಾತೆ ನಮಗೇನು ಹೊಸದಲ್ಲ ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ಏನೇ ಕಾರ್ಯಕ್ರಮ ಆಯೋಜಿಸಿದ್ರೂ ಎಂಇಎಸ್ ಮೂಗು ತೂರಿಸದಿದ್ರೆ ನಿದ್ರೆ ಬರಲ್ಲ ಅನ್ಸುತ್ತೆ, ಅದಕ್ಕಾಗಿಯೇ ಈ ಬಾರಿಯೂ ಕೂಡ ಸರ್ಕಾರ ನಡೆಸುತ್ತಿರುವ ಚಳಿಗಾಲದ ಅಧಿವೇಶನವನ್ನು ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಖ್ಯಾತೆ ತೆಗೆಯಲು ಮಹಾ ಮೇಳಾವ್ ಆಯೋಜನೆ ಮಾಡಿತ್ತು. ತಿಲಕವಾಡಿ ಲಸಿಕೆ ಡಿಪೋ ಬಳಿ ಮಹಾ ಮೇಳಾವ್‌ಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಎಂಇಎಸ್ ಹಿರಿಯ ಮುಖಂಡ ದೀಪಕ್ ದಾಲ್ವಿ ಅವರ ಮುಖಕ್ಕೆ ಕೆಲವು ಕನ್ನಡಪರ ಸಂಘಟನೆಗಳ ಹೋರಾಟಗಾರರು ಮಸಿ ಬಳಿದರು. ಇದರಿಂದ ಆಕ್ರೋಶಗೊಂಡ ಎಂಇಎಸ್ ಮುಖಂಡರು ನಾಳೆ ಬೆಳಗಾವಿ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್ ಹಿನ್ನೆಲೆ ನಾಳೆ ಬೆಳಗಾವಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.