National

ಶಂಷಾಬಾದ್‌ ಏರ್‌ಪೋರ್ಟ್‌ನಲ್ಲಿ ಗೋಲ್ಡ್‌ ಸ್ಮಗ್ಲರ್‌ ಖಾಕಿ ವಶಕ್ಕೆ

ಹೈದರಾಬಾದ್:‌ ಇತ್ತೀಚೆಗೆ ವಿಮಾನ ನಿಲ್ದಾಣಗಳಲ್ಲಿ ಗಾಂಜಾ, ಡ್ರಗ್ಸ್‌, ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ವಿದೇಶಗಳಿಂದ ಮಾದಕ ವಸ್ತುಗಳು, ಬಂಗಾರವನ್ನು ಸ್ಮಗ್ಮಿಂಗ್‌ ಮಾಡುವ ಕಾರ್ಯವನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಶೀಲತೆಯಿಂದ ಇಂತಹ ಅಪರಾಧ ಪ್ರಕರಣಗಳು ಬೆಳಕಿಗೆ ಬಂದು ಕೂಡಲೇ ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿದೆ. ನೀರಿನ ಬಾಟೆಲ್‌, ಪರ್ಸ್‌, ಹ್ಯಾಂಡ್‌ಬ್ಯಾಗ್‌, ಒಳ ಉಡುಪುಗಳು, ಶೂ, ದೇಹದ ಒಳಗೂ ಸ್ಮಗ್ಲಿಂಗ್‌ ವಸ್ತುಗಳನ್ನು ಇಟ್ಟುಕೊಂಡು ರೆಡ್‌ ಹ್ಯಾಂಡಾಗಿ ಸಿಕ್ಕಿರುವ ಸುದ್ದಿಗಳನ್ನು ನಾವು ನೋಡಿದ್ದೇವೆ. ಇಂದು ಅಂತದ್ದೇ ಮತ್ತೊಂದು ಕೇಸ್‌ ದಾಖಲಾಗಿದೆ.

ನೆರೆ ರಾಜ್ಯದ ಆಂಧ್ರಪ್ರದೇಶದ ಶಂಷಾಬಾದ್‌ ಏರ್‌ಪೋರ್ಟ್‌ನಲ್ಲಿ ಅಂತರಾಷ್ಟ್ರೀಯ ಗೋಲ್ಡ್‌ ಸ್ಮಗ್ಲರ್‌ನ ಬಂಧನವಾಗಿದೆ. ಆರೋಪಿ ದುಬೈನಿಂದ ಹೈದರಾಬಾದ್‌ಗೆ ತರುತ್ತಿದ್ದ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 2K.G715gram ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಬರೋಬ್ಬರಿ ಒಂದು ಕೋಟಿ ಮೂವತ್ತು ಲಕ್ಷ ಎಂದು ಅಂದಾಜು ಮಾಡಲಾಗಿದೆ. ಆರೋಪಿ ಬಂಗಾರವನ್ನು ಚೈನ್‌ ಹಾಗೂ ಪೇಸ್ಟ್‌ ರೂಪದಲ್ಲಿ ಹ್ಯಾಂಡ್‌ಬ್ಯಾಗ್‌ನಲ್ಲಿಟ್ಟುಕೊಂಡಿದ್ದಾನೆ. ವಿಮಾನ ನಿಲ್ದಾಣದಲ್ಲಿ ಸ್ಮಗ್ಲರ್‌ನ ಹಾವಭಾವದಿಂದ ಅನುಮಾನಗೊಂಡ ಕಸ್ಟಮ್ಸ್‌ ಅಧಿಕಾರಿಗಳು ಆತನನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಆತನ ಬಳಿ ಬೆಲೆ ಬಾಳುವ ಬಂಗಾರ ಇರುವುದು ಪತ್ತೆಯಾದ ಕೂಡಲೇ ಆತನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

Share Post