National

1.30 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ; ಡ್ರಗ್‌ ಪೆಡ್ಲರ್‌ ಅಂದರ್‌

ಕರಿಂಗಂಜ್‌ (ಅಸ್ಸಾಂ): ಗಡಿ ರಕ್ಷಣಾ ಸಿಬ್ಬಂದಿ ಭಾರಿ ಪ್ರಮಾಣದ ಡ್ರಗ್ಸ್‌ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಅಸ್ಸಾಂ ಕರೀಂಗಂಜ್‌ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. 

ದಾಳಿಯಲ್ಲಿ ಒಬ್ಬ ಡ್ರಗ್‌ ಪೆಡ್ಲರ್‌ನನ್ನು ಬಂಧಿಸಲಾಗಿದ್ದು, ಆತನಿಂದ 26000 ಯಬಾ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಯಬಾ ಮಾತ್ರೆಗಳು ತುಂಬಾ ದುಬಾರಿಯ ಮಾದಕ ವಸ್ತುವಾಗಿದೆ. ವಶಪಡಿಸಿಕೊಂಡಿರುವ ಮಾತ್ರೆಗಳ ಬೆಲೆ ಬರೋಬ್ಬರಿ 1.30 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಡ್ರಗ್ಸ್‌ ಎಲ್ಲಿಂದ ತಂದಿದ್ದು ಹಾಗೂ ಯಾರಿಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

Share Post