Crime

ಪುಷ್ಪ ಸಿನಿಮಾ ನೋಡಿ ಕೊಲೆ ಮಾಡಿದ ಅಪ್ರಾಪ್ತರು ಅಂದರ್

ದೆಹಲಿ: ದಿನನಿತ್ಯ ಬದುಕಲ್ಲಿ ತುಂಬಾ ವಿಚಾರಗಳು ಇನ್ನೊಬ್ಬರನ್ನು ನೋಡಿ ಪ್ರೇರೇಪಿತರಾಗಿ ನಡೆಯುತ್ತವೆ. ಅದರಲ್ಲೂ ಸಿನಿಮಾಗಳನ್ನು ನೋಡಿ ಅಲ್ಲಿರುವ ಪಾತ್ರಗಳಂತೆ. ಮತ್ತು ಸನ್ನಿವೇಶಗಳಂತೆ ತಮ್ಮ ಬದುಕು ಇದ್ದರೆ ಚನ್ನಾಗಿರುತ್ತದೆ ಎಂದು ಸುಮಾರು ಜನ ತಿಳಿದುಕೊಳ್ತಾರೆ. ಹಾಗೇ ಮಾಡ್ತಾರೆ ಕೂಡ. ವಾಸ ಮಾಡುವ ಮನೆಯಿಂದ ಮನೆಯಿಂದ ಹಿಡಿದು ಹಾಕುವ ಬಟ್ಟೆ, ಜೀವನ ಕ್ರಮ ಹೀಗೆ ಎಲ್ಲವೂ ಕಾಪಿ ಪೇಸ್ಟ್‌ ಆದ್ರೆ ಎಷ್ಟು ಸುಂದರಾವಾಗಿರುತ್ತೆ ಎಂದು ಯೋಚಿಸುವವರೂ ಇರ್ತಾರೆ. ಅದರ ಜೊತೆಗೆ ದ್ವೇ಼, ಅಸೂಯೆ, ಕೊಲೆಗಳೂ ಕೂಡ.

ಹೌದು ಇದು ನೂರಕ್ಕೆ ನೂರರಷ್ಟು ಸತ್ಯ. ಇನ್ನುಬ್ಬರ ಮೇಲಿನ ದ್ವೇಷಕ್ಕೋ ಅಥವಾ ತಾವು ಇದ್ದಕ್ಕಿದ್ದಂತೆ ಜನರೆದರು ಹೀರೋಗಳಾಗಲಿಕ್ಕೋ.. ಒಂದು ಹವಾ ಮೇಂಟೈನ್‌ ಮಾಡಲಿಕ್ಕೋ ಇನ್ಯಾವುದೋ ಉದ್ದೇಶದಿಂದ ಕೆಲವೊಂದು ಭಯಾನಕ ಕೃತ್ಯಗಳಿಗೆ ಕೈ ಹಾಕ್ತಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಘಟನೆ ಕೂಡ ಅಂಥದ್ದೇ…

ಇತ್ತೀಚೆಗೆ ಬಿಡುಗಡೆಯಾದ ಅಲ್ಲು ಅರ್ಜುನ್‌ ನಟನೆಯ ಪುಷ್ಟ ಸಿನಿಮಾದಿಂದ ಪ್ರೇರಿತರಾಗಿ ಅಪ್ರಾಪ್ತ ಯುವಕರು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದಾರೆ. ತಾವು ಫೇಮಸ್‌ ಆಗಲು ಮೂವರು ಅಪ್ರಾಪ್ತ ಯುವಕರು ಒಬ್ಬ ವ್ಯಕ್ತಿಯನ್ನು ಹರಿತವಾದ ಆಯುಧದಿಂದ ಗಾಯಗೊಳಿಸಿದ್ದಾರೆ. ಕೂಡಲೇ ವಿಚಾರ ತಿಳಿದು ಪೊಲೀಸರು ಜಹಾಂಗೀರ್‌ ಪುರಿಯ ಕೆ ಬ್ಲಾಕ್‌ ತಲುಪುವಷ್ಟರಲ್ಲಿ ಯುವಕರು ವ್ಯಕ್ತಿಯನ್ನು ಥಳಿಸಿ ವಿಡಿಯೋ ಚಿತ್ರೀಕರಣ ಮಾಡ್ತಿದ್ದರಂತೆ. ತಕ್ಷಣ ಮೂವರನ್ನು ಪೊಲೀಸರು ಥಳಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಪಾರ ಗಾಯಗಳಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಮೊಬೈಲ್‌, ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬೇಕೆಂದಿದ್ದ ಯುವಕರ ದುಷ್ಟ ಸಾಹಸ ನೆರವೇರಲಿಲ್ಲ. ಸದ್ಯ ಮಾಡಿದ ತಪ್ಪಿಗೆ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ಇವರ ಕುಚೇಷ್ಟಗೆ ಅಮಾಯಕ ವ್ಯಕ್ತಿ ಬಲಿಯಾಗಿದ್ದಾನೆ.

Share Post