ರಾಮದಾಸ್-ಪ್ರೇಮಕುಮಾರಿ ಪ್ರಕರಣ; ಸುಪ್ರೀಂ ಕೋರ್ಟ್ನಲ್ಲೂ ರಾಮದಾಸ್ಗೆ ಹಿನ್ನಡೆ
ನವದೆಹಲಿ; ಪ್ರೇಮಕುಮಾರಿ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಾಮದಾಸ್ಗೆ ಸುಪ್ರೀಂ ಕೋರ್ಟ್ನಲ್ಲೂ ಹಿನ್ನಡೆಯಾಗಿದೆ. 2013ರಲ್ಲಿ ಪ್ರೇಮಕುಮಾರಿ ದಾಖಳಿಸಿದ್ದ ದೂರಿಗೆ ತಡೆ ನೀಡಬೇಕೆಂದು ರಾಮದಾಸ್ ಹೈಕೋರ್ಟ್ ಮೊರೆಹೋಗಿದ್ದರು. ಆದ್ರೆ ಹೈಕೋರ್ಟ್ ರಾಮದಾಸ್ ಮನವಿಯನ್ನು ತಿರಸ್ಕರಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡಾ ರಾಮದಾಸ್ ಅರ್ಜಿ ವಜಾ ಮಾಡಿದ್ದು, ರಾಮದಾಸ್ಗೆ ಕಾನೂನು ಕಂಟಕ ಎದುರಾಗಿದೆ.
ಪ್ರೇಮಕುಮಾರಿ ಎಂಬುವವರು 2013ರಲ್ಲಿ ರಾಮದಾಸ್ ಅವರು ಮದುವೆಯಾಗುತ್ತೇನೆಂದು ಹೇಳಿ ಮೋಸ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಆದ್ರೆ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿತ್ತು. ಆದ್ರೆ ತಮ್ಮನ್ನು ಪ್ರಶ್ನೆ ಮಾಡದೇ ಸಿಐಡಿ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ಪ್ರೇಮಕುಮಾರಿ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಅನಂತರ ಹೈಕೋರ್ಟ್ ಕೂಡಾ ಪ್ರೇಮಕುಮಾರಿ ಪರವೇ ತೀರ್ಪು ನೀಡಿತ್ತು.