BengaluruCrimeHealth

ಖ್ಯಾತ ವೈದ್ಯೆ ಹೆಸರಲ್ಲಿ ಅಶ್ಲೀಲ ಫೋಟೋ ಕಳುಹಿಸುತ್ತಿದ್ದವರ ಅರೆಸ್ಟ್‌

ಬೆಂಗಳೂರು; ನಾಡಿನ ಖ್ಯಾತ ಸ್ತ್ರೀರೋಗ ತಜ್ಞೆ ಪದ್ಮಿನಿ ಪ್ರಸಾದ್‌ ಅವರ ಹೆಸರಲ್ಲಿ  ಮಹಿಳೆಯೊಬ್ಬರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಖ್ಯಾತ ಸ್ತ್ರೀರೋಗ ತಜ್ಞೆಯಾಗಿರುವ ಪದ್ಮಿನಿ ಪ್ರಸಾದ್‌ ಎಂದು ಹೇಳಿಕೊಂಡು ಆರೋಪಿಗಳು ಮಹಿಳೆಯರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಡಾ.ಪದ್ಮಿನಿ ಪ್ರಸಾದ್‌ ಅವರು ಬೆಂಗಳೂರು ಉತ್ತರ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Post