ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆ ಹಿಡಿದ ಆದಿತ್ಯ ಎಲ್-1
ನವದೆಹಲಿ; ಸೂರ್ಯನ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ಇಸ್ರೋ ಇತ್ತೀಚೆಗಷ್ಟೇ ಆದಿತ್ಯ ಎಲ್-೧ ಎಂಬ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಇದೀಗ ಈ ಆದಿತ್ಯ ಎಲ್-೧ ಉಪಗ್ರಹ ಭೂಮಿ ಹಾಗೂ ಚಂದ್ರ ಫೋಟೋಗಳನ್ನು ಸೆರೆ ಹಿಡಿದಿದೆ. ಈ ವಿಚಾರವನ್ನು ಇಸ್ರೋ ಹಂಚಿಕೆ ಕೊಂಡಿದೆ. ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದೆ.
ಆದಿತ್ಯ-ಎಲ್1 ಕಕ್ಷೆ ತಲುಪಿದ ಸಮಯದಿಂದ ದಿನಕ್ಕೆ 1,440 ಚಿತ್ರಗಳನ್ನು ಕಳುಹಿಸುವ ನಿರೀಕ್ಷೆ ಇದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಆದಿತ್ಯ-ಎಲ್1ನ್ನು ಉಡಾವಣೆ ಮಾಡಲಾಯಿತು.