ದರೋಡೆಕೋರರ ಕೆಲಸವಲ್ಲ; ಪತ್ನಿಯೇ ಕೊಟ್ಟಿದ್ದಳು ಸುಪಾರಿ..!!
ದೊಡ್ಡಬಳ್ಳಾಪುರ; ದೊಡ್ಡಬಳ್ಳಾಪುರದ ಸರ್ಕಾರಿ ಅಧಿಕಾರಿ ಮುಕುಂದ ಅವರ ಮೇಲೆ ಮೇ 25ರಂದು ನಡೆದ ಹಲ್ಲೆ ಪ್ರಕರಣಕ್ಕೆ ಟ್ವೀಸ್ಟ್ ಸಿಕ್ಕಿದೆ. ಈ ಪ್ರಕರಣ ಸಂಬಂಧ ದೊಡ್ಡ ಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅದ್ರಲ್ಲಿ ಮುಕುಂದ ಅವರ ಪತ್ನಿಯೂ ಸೇರಿದ್ದಾಳೆ ಅನ್ನೋದು ಗಮನಾರ್ಹ ಸಂಗತಿ.
ಹೌದು, ಮೇ 25ರಂದು ಸರ್ಕಾರಿ ಅಧಿಕಾರಿ ಮುಕುಂದ ಅವರ ಮೇಲೆ ದೊಡ್ಡ ಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ ಹಲ್ಲೆ ನಡೆದಿತ್ತು. ಅನಂತರ ಮುಕಂದ ಅವರು ಪೊಲೀಸ್ ಠಾಣೆಯಲ್ಲಿ ದೊರೋಡೆಕೋರರು ಹಲ್ಲೆ ನಡೆಸಿದ್ದಾರೆಂದು ಭಾವಿಸಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದೇ ಬೇರೆ. ಯಾಕಂದ್ರೆ ಗಂಡ ಮುಕುಂದನ ಹತ್ಯೆಗೆ ಆತನ ಪತ್ನಿ ಮಮತಾ ಎಂಬಾಕೆಯೇ ಸುಪಾರಿ ನೀಡಿದ್ದಳು. ಆದ್ರೆ ಅದು ಹೇಗೋ ಮುಕುಂದ ಆವತ್ತು ಬಚಾವಾಗಿದ್ದರು.
ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿತ್ತಂತೆ. ಈ ಕಾರಣದಿಂದಾಗಿ ತನ್ನ ಗೋಳವನ್ನು ಮಮತಾ ತನ್ನ ಸ್ಮೇಹಿತೇ ತಸ್ಲೀಮಾ ಬಳಿ ಹೇಳಿಕೊಂಡಿದ್ದಾಳೆ. ತಸ್ಲೀಮಾ ಸುಪಾರಿ ಕೊಟ್ಟು ನಿನ್ನ ಗಂಡನನ್ನು ಕೊಲೆ ಮಾಡಿಸು ಎಂದು ಸಲಹೆ ಕೊಟ್ಟಿದ್ದಾಳೆ. ಅದರಂತೆ ಮಮತಾ ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದಳು ಎಂದು ತಿಳಿದುಬಂದಿದೆ.
ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಮಮತಾ ಹಾಗೂ ಆಕೆಯ ಸ್ನೇಹಿತೆ ತಸ್ಲೀಮಾ ಹಾಗೂ ಸಪಾರಿ ಪಡೆದಿದ್ದ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.