ಪಾಗಲ್ ಪ್ರೇಮಿಯಿಂದ ಯುವತಿಯ ತಂದೆ-ತಾಯಿಯ ಬರ್ಬರ ಹತ್ಯೆ!
ವಾರಂಗಲ್; ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ತಂದೆ-ತಾಯಿಯನ್ನು ಪಾಗಲ್ ಪ್ರೇಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಡ್ಡಬಂದ ಯುವತಿ ಹಾಗೂ ಆಕೆಯ ಸಹೋದರನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ..
ತೆಲಂಗಾಣದ ವಾರಂಗಲ್ ಜಿಲ್ಲೆಯ ಚೆನ್ನರಾವ್ ಪೇಟೆ ಬಳಿಯ ಚಿಂತಲತಾಂಡಾದಲ್ಲಿ ಈ ಕೃತ್ಯ ಎಸಗಲಾಗಿದೆ.. ಬಾನೋತ್ ಶಿವ ಹಾಗೂ ಸುಗುಣ ದಂಪತಿಯೇ ಕೊಲೆಯಾದವರು.. ಮಚ್ಚುನಿಂದ ಕೊಚ್ಚಿ ಇಬ್ಬರನ್ನೂ ಕೊಲೆ ಮಾಡಲಾಗಿದೆ..
ಈ ದಂಪತಿಗೆ ದೀಪಿಕಾ ಎಂಬ ಮಗಳು ಹಾಗೂ ಮತ್ತೊಬ್ಬ ಮಗ ಇದ್ದಾನೆ.. ದೀಪಿಕಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಬನ್ನಿ ಎಂಬ ವ್ಯಕ್ತಿ ಹಿಂದೆ ಬಿದ್ದಿದ್ದ.. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ದಾಳಿ ಮಾಡಿ ಯುವತಿಯ ತಂದೆ-ತಾಯಿಯನ್ನು ಬರ್ಬರವಾಗಿ ಕೊಂದಿದ್ದಾನೆ.. ಇಬ್ಬರು ಮಕ್ಕಳಿಗೂ ಗಾಯಗಳಾಗಿವೆ..
ಪೊಲೀಸರು ಆರೋಪಿ ಬನ್ನಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ..