National

ಥಾಣೆ – ದಿವಾ ಸಂಪರ್ಕಿಸುವ ರೈಲು ಮಾರ್ಗ : ಇಂದು ಮೋದಿಯಿಂದ ಉದ್ಘಾಟನೆ

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಇಂದು ಥಾಣೆ ಮತ್ತು ದಿವಾ ರೈಲು ಮಾರ್ಗಗಳನ್ನು ಸಂಪರ್ಕಿಸುವ ಎರಡು ರೈಲು ಮಾರ್ಗಗಳನ್ನು ಇಂದು ಉದ್ಘಾಟಿಸಲಿದ್ದಾರೆ.

ಇಂದು ಸಂಜೆ 4:30ಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮೋದಿ ರೈಲು ಮಾರ್ಗಗಳನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಪ್ರಧಾನಿ ಅವರು ಭಾಷಣ ಮಾಡಲಿದ್ದಾರೆ.

 

ಥಾಣೆ ಮತ್ತು ದಿವಾ ನಡುವಿನ ರೈಲು ಮಾರ್ಗಗಳನ್ನು ನಿರ್ಮಿಸುವುದಕ್ಕೆ ಸುಮಾರು 620ಕೋಟಿ ರೂಗಳನ್ನು ಹೂಡಲಾಗಿದೆ. ಈ ಮಾರ್ಗಗಳಲ್ಲಿ 1.4ಕಿಮೀ ಮೇಲ್ಸೇತುವೆ, ಮೂರು ಪ್ರಮುಖ ಸೇತುವೆಗಳು, 21 ಸಣ್ಣ ಸೇತುವೆಗಳನ್ನು ಒಳಗೊಂಡಿವೆ. ಈ ನೂತನ ರೈಲು ಮಾರ್ಗದಿಂದ ದೀರ್ಘ ಪ್ರಯಣ ರೈಲುಗಳ ಸಂಚಾರದ ಅಡಚಣೆಯನ್ನು ನಿವಾರಿಸಬಹುದು ಎಂದು ನಿರೀಕ್ಷಿಸಲಾಗಿದೆ.

Share Post