International

ಉಕ್ರೇನ್‌ ಕಿಂಡರ್‌ಗಾರ್ಟನ್‌ ಮೇಲೆ ರಷ್ಯ ದಾಳಿ

ನ್ಯೂಯಾರ್ಕ್‌ : ಉಕ್ರೇನ್‌ ದೇಶದ ಮೇಲೆ ರಷ್ಯ ದಾಳಿ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ ಆನಂತರ ರಷ್ಯ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದೇವೆ ಎಂದು ಸೂಚಿಸಿ ವೀಡಿಯೋ ಒಂದನ್ನು ಹರಿ ಬಿಟ್ಟಿತ್ತು. ರಷ್ಯಾ ತನ್ನ ಸೇನೆಯನ್ನು ಹಿಂಪಡೆದಿಲ್ಲ ಎಚ್ಚರದಿಂದಿರಿ ಎಂದು ಅಮೆರಿಕ ಉಕ್ರೇನ್‌ಗೆ ಎಚ್ಚರಿಸಿತ್ತು. ಈಗ ಉಕ್ರೇನ್‌ನ ಕಿಂಡರ್‌ಗಾರ್ಟನ್‌ ಮೇಲೆ ರಷ್ಯಾ ಫಿರಂಗಿ ದಾಳಿ ನಡೆಸಿದೆ.

ಉಕ್ರೇನ್‌ ನಿಯಂತ್ರಣದಲ್ಲಿರುವ ಡಾನ್‌ಬಾಸ್‌ ಎಂಬಲ್ಲಿನ ಶಿಶುವಿಹಾರದ ಮೇಲೆ ರಷ್ಯಾ ಶೆಲ್‌ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಶಿಕ್ಷಕರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಅಮೆರಿಕ ಹೇಳಿದ ಮಾತು ಈಗ ನಿಜವಾಗುವಂತೆ ತೋರುತ್ತಿದೆ. ಉಕ್ರೇನ್‌ ಮೇಲೆ ದಾಳಿಯಾಗುವ ಸಾಧ್ಯತೆ ಹೆಚ್ಚಿದೆ. ಅಮೆರಿಕ ರಾಷ್ಟ್ರವು ರಷ್ಯಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ರಷ್ಯ ಮುಂಬರುವ ದಿನಗಳಲ್ಲಿ ತನ್ನ ನೆರೆ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಲು ಆದೇಶಿಸಬಹುದು ಎಂದು ಗುಪ್ತಚರ ಇಲಾಖೆಯ ಮೂಲಕ ಗೊತ್ತಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ ಹೇಳಿದ್ದಾರೆ. ಈ  ಮಧ್ಯೆ ಬ್ಲಿಂಕೆನ್‌ ಸ್ಪಷ್ಟ ಸಂದೇಶ ರವಾನಿಸಿದ್ದು, ” ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮಾಡುವುದಿಲ್ಲ ಎಂದು ರಷ್ಯಾ ಘೋಷಿಸಬೇಕು” ಎಂದು ಹೇಳಿದ್ದಾರೆ.

ಸೇನಾ ಪಡೆಗಳು, ಟ್ಯಾಂಕ್‌ಗಳು, ವಿಮಾನಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಇನ್ನು ನಿಮ್ಮ ರಾಜತಾಂತ್ರಿಕರನ್ನು ಸಂಧಾನಕ್ಕೆ ಕಳುಹಿಸಬೇಕು, ಇದರಿಂದ ನಾವು ಯುದ್ಧ ಮಾಡುವುದಿಲ್ಲ ಎಂದು ಸಾರಬೇಕು ಎಂದು ಅಮೆರಿಕ ರಷ್ಯಾಗೆ ಆಗ್ರಹಿಸಿದೆ.

 

Share Post