ಪತ್ನಿ ತಲೆ ಕಡಿದು ಬರ್ಬರ ಹತ್ಯೆ ಮಾಡಿದ ಪಾಪಿ ಪತಿ
ಹೈದರಾಬಾದ್; ಹೈದರಾಬಾದ್ ನಲ್ಲಿ ಭೀಕರ ಹತ್ಯೆ ನಡೆದಿದೆ. ಪತಿಯೇ ತನ್ನ ಪತ್ನಿಯ ತಲೆ ಕಡಿದಿದ್ದಾನೆ. ತನ್ನ ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಆಟೋ ಡ್ರೈವರ್ ಆಗಿರುವ ಪತಿ ಈ ಕೃತ್ಯ ಎಸಗಿದ್ದಾನೆ.
ಅಬ್ದುಲ್ಲಾಪುರ್ಮೆಟ್ ಜೆಎನ್ಎನ್ಯುಆರ್ಎಂ ಕಾಲೋನಿಯಲ್ಲಿರುವ ಎರಡು ಬೆಡ್ರೂಮಿನ ಸರ್ಕಾರಿ ವಸತಿ ಗೃಹದಲ್ಲಿ ಹಂತಕ ವಿಜಯ್ ವಾಸವಿದ್ದ. ಸಹೋದರಿಯ ಮನೆಯಲ್ಲಿಯೇ ಪತ್ನಿ ಪುಷ್ಪಲತಾಳ ತಲೆ ಕಡಿದು ಮನೆಯಲ್ಲೆ ಇಟ್ಟುಕೊಂಡಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಪದೇಪದೆ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ವಿಜಯ್ ಹಾಗೂ ಪತ್ನಿ ಪುಷ್ಪಲತಾ ತನ್ನ ಸಹೋದರಿ ಮನೆಗೆ ಹೋಗಿದ್ದರು. ಅಲ್ಲಿಯೇ ಈ ಕೊಲೆ ನಡೆದಿದೆ.