National

UPSC ಮುಖ್ಯಪರೀಕ್ಷೆ ಮುಂದೂಡಿಕೆಗೆ ಅರ್ಜಿ; ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್‌

ನವದೆಹಲಿ:  ಕೊರೊನಾ ಹಿನ್ನೆಲೆಯಲ್ಲಿ UPSC ಮುಖ್ಯ ಪರೀಕ್ಷೆಯನ್ನು ಮುಂದೂಡುವಂತೆ ಪರೀಕ್ಷಾರ್ಥಿಗಳು ಮನವಿ ಮಾಡಿದ್ದು, ಈ ಸಂಬಂಧ UPSC ಗೆ ನಿರ್ದೇಶನ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಿಚಾರಣೆಗೆ ಸ್ವೀಕರಿಸಿದೆ.

ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಮೆಟ್ರೋ ನಗರಗಳಲ್ಲಿ ಕೊರೊನಾ ಪಾಟಿವಿಟಿ ರೇಟ್‌ ಜಾಸ್ತಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ UPSC ಮುಖ್ಯ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಪರೀಕ್ಷಾರ್ಥಿಗಳು ವಿವಿಧ ಕಡೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬರಬೇಕಾಗಿದೆ. ವಿವಿಧ ಭಾಗಗಳಿಂದ ಪರೀಕ್ಷಾರ್ಥಿಗಳು ಬರುವುದರಿಂದ ಕೊರೋನಾ ಮತ್ತಷ್ಟು ಹರಡಲು ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ ಪರೀಕ್ಷೆ ಮುಂದೂಡಲು ನಿರ್ದೇಶನ ನೀಡುವಂತೆ ಕೆಲ ಪರೀಕ್ಷಾರ್ಥಿಗಳು ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಾನ್ಯ ಮಾಡಿದ್ದು, ವಿಚಾರಣೆಗೆ ಕೈಗೆತ್ತಿಕೊಂಡಿದೆ. ಇಂದು ಅಥವಾ ನಾಳೆಯೊಳಗೆ ಅರ್ಜಿಯ ತೀರ್ಪು ಬರಲಿದೆ. ಅಂದಹಾಗೆ ಇದೇ ಜನವರಿ 7 ರಂದು UPSC ಮುಖ್ಯ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಪರೀಕ್ಷೆ ಮುಂದೂಡಿ ಎಂದು ಪರೀಕ್ಷಾರ್ಥಿಗಳು ಮನವಿ ಮಾಡುತ್ತಿದಾರೆ. ಕೋರ್ಟ್‌ ನಿರ್ದೇಶನ ನೀಡಿದರೆ, ಪರೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

Share Post