NationalNews

ಗುಜರಾತ್‌ ವಿಧಾನಸಭಾ ಚುನಾವಣೆ; ಸರತಿಯಲ್ಲಿ ನಿಂತು ಮೋದಿ ಮತದಾನ

ಗಾಂಧೀನಗರ; ಪ್ರಧಾನಿ ಮೋದಿ ತವರು ಗುಜರಾತ್‌ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ. ಇಂದು ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಕ್ಕು ಚಲಾಯಿಸಿದರು. ಸರತಿ ಸಾಲಿನಲ್ಲಿ ನಿಂತು ಪ್ರಧಾನಿ ಮತದಾನ ಮಾಡಿದ್ದು ಗಮನ ಸೆಳೆಯಿತು.

ಅಹಮದಾಬಾದ್‌ನ ನಿಶಾನ್‌ ಪಬ್ಲಿಕ್‌ ಶಾಲೆಯ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾವಣೆ ಮಾಡಿದರು. ನೇರವಾಗಿ ಹೋಗಿ ಮತ ಚಲಾಯಿಸಿಲು ಅವಕಾಶವಿದ್ದರೂ ಅವರು ಸರತಿ ಸಾಲಿನಲ್ಲಿ ನಿಂತರು. ತಮ್ಮ ಸರದಿ ಬಂದಾಗಲೇ ಮತದಾನ ಮಾಡಿದರು. ಇವತ್ತೂ ಕೂಡಾ ಮೋದಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ದಾಖಲೆ ನಿರ್ಮಿಸುವಂತೆ ಮತದಾರರಿಗೆ ಮನವಿ ಮಾಡಿದರು. 2ನೇ ಹಂತದಲ್ಲಿ 883 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಎಎಪಿ ಎಲ್ಲ 91 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ 90 ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು, ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಹಾಕಿಲ್ಲ. ಡಿಸೆಂಬರ್‌ 8ರಂದ ಮತ ಎಣಿಕೆ ನಡೆಯಲಿದೆ.

Share Post