ಮನೆ ಮುಂದೆ ಕುಳಿತಿದ್ದ ನವ ವಿವಾಹಿತೆಗೆ ಗುಂಡಿಕ್ಕಿ ಕೊಲೆ!
ಬಿಹಾರ; ಮನೆ ಮುಂದೆ ಕುಳಿತಿದ್ದ ನವವಿವಾಹಿತೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ.. ಬಿಹಾರದ ಕಥಿಹಾರ್ ಜಿಲ್ಲೆಯ ಪೋತಿಯಾದಲ್ಲಿರುವ ತನ್ನ ಪತಿ ಮನೆ ಮುಂದೆ ಕುಳಿತಿದ್ದಾಗ ಈ ಕೃತ್ಯ ಎಸಗಲಾಗಿದೆ..
ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾರೆ.. 23 ವರ್ಷದ ರೋಷನಿ ಹತ್ಯೆಯಾದ ನವವಿವಾಹಿತೆಯಾಗಿದ್ದಾಳೆ.. ದುಷ್ಕರ್ಮಿಗಳು ಗುಂಡು ಹಾರೈಸಿದಾಗ ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಲಾದರು ಯಾವುದೇ ಪ್ರಯೋಜನವಾಗಿಲ್ಲ..
ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.. ತೀವ್ರ ಗಾಯಗೊಂಡಿದ್ದ ರೋಷನಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು.. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಮೃತ ರೋಶನಿ, ಬಿಹಾರದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್ ಮಂಡಲ್ ಎಂಬವರನ್ನು ವಾರದ ಹಿಂದಷ್ಟೇ ಮದುವೆಯಾಗಿದ್ದಳು. ಪ್ರೀತಿಸಿ ಮದುವೆಯಾಗಿದ್ದು, ಕಾರ್ತಿಕ್ ತಾಯಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.