ಉಗ್ರ ಶಾರೀಖ್‌ಗೆ ಬರ್ತಿತ್ತು ವಿದೇಶಿ ಹಣ; 100ಕ್ಕೂ ಹೆಚ್ಚು ಮೈಸೂರಿಗರ ಅಕೌಂಟ್‌ಗೆ ಹಣ ವರ್ಗ
ಮಂಗಳೂರು; ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಉಗ್ರ ಶಾರೀಖ್ ಬಗ್ಗೆ ಎನ್‌ಐಎ ಸ್ಫೋಟಕ ಮಾಹಿತಿ ಸಂಗ್ರಹಿಸಿದೆ. ಉಗ್ರನಿಗೆ ವಿದೇಶದಿಂದ ಡಾಲರ್ ರೂಪದಲ್ಲಿ ಹಣ ಬರುತ್ತಿತ್ತು ಅನ್ನೋದು ತನಿಖೆ ವೇಳೆ ಬಹಿರಂಗವಾಗಿದೆ. ಆ ಹಣವನ್ನು ಶಾರೀಖ್ ಬೇರೆಯವರ ಅಕೌಂಟ್‌ಗೆ ವರ್ಗಾಯಿಸಿ ಅವರಿಂದ ಹಣ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಆತ ಮೈಸೂರಿನಲ್ಲಿ ನೆಲೆಸಿದ್ದಾಗ, ಮೈಸೂರಿನ ನೂರಕ್ಕೂ ಹೆಚ್ಚು ಜನರ ಅಕೌಂಟ್‌ಗೆ ಶಾರೀಖ್ ಹಣ ವರ್ಗಾವಣೆ ಮಾಡಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಎನ್‌ಐಎ ಅಧಿಕಾರಿಗಳು ಮೈಸೂರಿನ ನಲವತ್ತಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿದ್ದಾರೆ.
ಶಾರೀಖ್‌ನ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಾಯ ಮಾಡುತ್ತಿದ್ದರು. ಆತನಿಗೆ ಡಾಲರ್ ರೂಪದಲ್ಲಿ ಆರ್ಥಿಕ ಸಹಾಯ ಸಿಗುತ್ತಿತ್ತು ಎಂಬ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕಲೆ ಹಾಕಿದ್ದಾರೆ. ಡಾರ್ಕ್ ವೆಬ್ ಮೂಲಕ ಊಗ್ರ ಶಾರೀಖ್ ಹಣ ಸಂದಾಯವಾಗುತ್ತಿತ್ತು ಎಂದು ತಿಳಿದುಬಂದಿದೆ. ಬಳಿಕ ಅದನ್ನು ಆತ ಭಾರತೀಯ ಕರೆನ್ಸಿಯಾಗಿ ಬದಲಾಯಿಸಿ, ಅದನ್ನು ತನ್ನ ಪರಿಚಯಿಸ್ಥರ ಅಕೌಂಟ್‍ಗೆ ಹಾಕಿಸುತ್ತಿದ್ದ. ಅವರಿಂದ ಮತ್ತೆ ಹಣ ಡ್ರಾ ಮಾಡಿಸಿ, ಖರ್ಚು ಮಾಡುತ್ತಿದ್ದ.
ಮೈಸೂರಿನಲ್ಲಿ ಹಿಂದೂ ಹೆಸರಿನಲ್ಲಿ ನೆಲೆಸಿದ್ದ ಉಗ್ರ ಶಾರೀಖ್, ಸಾಕಷ್ಟು ಜನರನ್ನು ಪರಿಚಯ ಮಾಡಿಕೊಂಡಿದ್ದ. ಅವರ ಅಕೌಂಟ್‍ಗೆ ಹಣ ವರ್ಗಾವಣೆ ಮಾಡಿ, ಅವರಿಂದ ಹಣ ಡ್ರಾ ಮಾಡಿಸಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.