National

ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಏರಿಕೆ; 16 ದಿನದಲ್ಲಿ 10 ರೂಪಾಯಿ ಹೆಚ್ಚಳ

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬೆಲೆ ಸತತ 16 ದಿನಗಳಲ್ಲಿ 14 ಬಾರಿ ಏರಿಕೆಯಾಗಿದೆ. ಇವತ್ತೂ ಕೂಡಾ ಪೆಟ್ರೋಲ್‌, ಡೀಸೆಲ್‌ ಬೆಲೆ 80 ಪೈಸೆಯಷ್ಟು ಜಾಸ್ತಿಯಾಗಿದೆ. ಇದರಿಂದಾಗಿ ಕಳೆದ 16 ದಿನದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರ್‌ಗೆ ತಲಾ 10 ರೂಪಾಯಿ ಏರಿಕೆಯಾದಂತಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ 111.09 ರೂ., ಡೀಸೆಲ್ 94.79 ರೂ. ರೂಪಾಯಿ ಆಗಿದೆ.

    ದೆಹಲಿಯಲ್ಲಿ ಸದ್ಯ ಪೆಟ್ರೋಲ್ ಬೆಲೆ ಲೀಟರ್​ಗೆ ನಿನ್ನೆ 104.61 ರೂಪಾಯಿ ಆಗಿದ್ದರೆ, ಇಂದು 105.41 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಲೀಟರ್‌ಗೆ 95.87 ರೂ. ನಿಂದ 96.67 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ 120.51 ರೂ., ಡೀಸೆಲ್ 104.77 ರೂ., ಚೆನ್ನೈನಲ್ಲಿ ಪೆಟ್ರೋಲ್ 110.86 ರೂ., ಡೀಸೆಲ್ 100.95 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 115.12 ರೂ., ಡೀಸೆಲ್ 99.83 ರೂಪಾಯಿ ಇದೆ.

Share Post