Districts

ಕಾರಿಗೆ ಐರಾವತ ಬಸ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ದಾರುಣ ಸಾವು

ಹುಬ್ಬಳ್ಳಿ: ಕೆಎಸ್‌ಆರ್‌ಟಿಸಿಯ ಐರಾವತ ಬಸ್‌ ಒಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ದಾರುಣ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಬಳಿ ನಡೆದಿದೆ. ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಹುಬ್ಬಳ್ಳಿಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

 

ಸಾರಿಗೆ ಬಸ್‌ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿತ್ತು. ಶಿರಗುಪ್ಪಿ ಬಳಿ ಬಂದಾಗ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.  ಶಿರಗುಪ್ಪಿ ಬಳಿಯ ರಸ್ತೆಯ ಮೊದಲ ತಿರುವಿನಲ್ಲಿಯೇ ರಾಂಗ್ ರೂಟಿಗೆ ಐರಾವತ್​ ಬಸ್​​ ಬಂದಿದ್ದರಿಂದ ಎದುರಿಗೆ ಬಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್​​​​ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಗೆ ಐರಾವತ್ ಬಸ್​​ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

Share Post