National

ದೆಹಲಿಯಲ್ಲಿ ಪೊಲೀಸರಿಗೆ ನಿದ್ದೆಗೆಡಿಸಿದ ಕೊರೊನಾ; 300 ಸಿಬ್ಬಂದಿಗೆ ಸೋಂಕು..!

ನವದೆಹಲಿ: ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ವೈದ್ಯರನ್ನು ಕಾಡುತ್ತಿದೆ. 250ಕ್ಕೂ ಹೆಚ್ಚು ವೈದ್ಯರು ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಿರುವಾಗಲೇ ದೆಹಲಿಯಲ್ಲಿ ಕೊರೊನಾ ಪೊಲೀಸರನ್ನು ಕಾಡೋದಕ್ಕೆ ಶುರು ಮಾಡಿದೆ. ದೆಹಲಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ಆರ್‌ಟಿಪಿಸಿಆರ್‌ ಟೆಸ್ಟ್‌ ನಲ್ಲಿ ಪೊಲೀಸ್‌ ಸಿಬ್ಬಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ದೆಹಲಿ ವ್ಯಾಪ್ತಿಯಲ್ಲಿ ಸುಮಾರು 80 ಸಾವಿರ ಪೊಲೀಸ್‌ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಪೊಲೀಸರು, ಕೊವಿಡ್‌ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದಾರೆ. ಹೀಗಿದ್ದರೂ, ಪೊಲೀಸರಿಗೆ ಕೊವಿಡ್‌ ಹರಡುತ್ತಿದೆ. ದೆಹಲಿ ವಿವಿಧ ಠಾಣೆಗಳು ಹಾಗೂ ವಿವಿಧ ಘಟಕಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೊರೊನಾ ತಗುಲಿದೆ. ಈ ಹಿನ್ನೆಲೆಯಲ್ಲಿ ಭೀತಿ ಶುರುವಾಗಿದೆ.
ಬಹುತೇಕ ಎಲ್ಲಾ ಸಿಬ್ಬಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಹೀಗಿದ್ದರೂ ಕೊವಿಡ್‌ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಚೂಣಿ ಕಾರ್ಯಕರ್ತರಾಗಿರುವ ಪೊಲೀಸರು, ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಎಲ್ಲಾ ಮುನ್ನೆಚ್ಚರಿಕೆಗಳನ್ನೂ ಅನುಸರಿಸಬೇಕೆಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆ ಪೊಲೀಸ್‌ ಇಲಾಖೆಯಿಂದ ಮಾಸ್ಕ್‌, ಸ್ಯಾನಿಟೈಸರ್‌ ಸೇರಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

Share Post