CrimeNational

ಆಂಧ್ರಪ್ರದೇಶದಲ್ಲಿ 9251.32 ಕೋಟಿ ರೂ.ಮೌಲ್ಯದ 7,552 ಎಕರೆಯಲ್ಲಿ ಬೆಳೆದಿದ್ದ ಗಾಂಜಾ ಸುಟ್ಟು ಭಸ್ಮ

ಆಂಧ್ರಪ್ರದೇಶ: ಎಪಿಯಲ್ಲಿ ಅಕ್ರಮ ಗಾಂಜಾ ಸಾಗಾಟ ಅವ್ಯಾಹತವಾಗಿ ಮುಂದುವರಿದಿದೆ. ಈ ಕುರಿತು ಡಿಜಿಪಿ ಎಂ.ಪಿ. ಗೌತಮ್ ಸವಾಂಗ್ ಪ್ರತಿಕ್ರಿಯೆ ನೀಡಿದ್ದು,  ಗಾಂಜಾ ನಿರ್ಮೂಲನೆಗೆ ʻಆಪರೇಷನ್ ಪರಿವರ್ತನೆʼ ಎಂಬ ಕಾರ್ಯಕ್ರಮ ಆರಂಭಿಸಲಾಗಿದೆ. ಗಾಂಜಾ ಬೆಳೆಗಾರರಿಗೆ ಮಾವೋವಾದಿಗಳು ಸಹಕಾರ ನೀಡುತ್ತಿದ್ದು, ಆ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ ಎಂದರು. ಒಡಿಶಾದ 23 ಜಿಲ್ಲೆಗಳು ಮತ್ತು ವಿಶಾಖಪಟ್ಟಣಂ ಏಜೆನ್ಸಿಯ 11 ವಲಯಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಗಾಂಜಾ ನಿರ್ಮೂಲನೆಗೆ ‘ಆಪರೇಷನ್ ಪರಿವರ್ತನೆʼ ಮೂಲಕ 11 ವಲಯಗಳ 313 ಉಪನಗರ ಗ್ರಾಮಗಳಲ್ಲಿ 406 ವಿಶೇಷ ತಂಡಗಳೊಂದಿಗೆ 9251.32 ಕೋಟಿ ರೂ.ಮೌಲ್ಯದ 7552 ಎಕರೆಯಲ್ಲಿ ಗಾಂಜಾ ಬೆಳೆ ನಾಶ ಪಡಿಸುವುದಾಗಿ ಡಿಜಿಪಿ ತಿಳಿಸಿದ್ದಾರೆ.

ಆಂಧ್ರ-ಒಡಿಶಾ ಗಡಿಯಲ್ಲಿ (AOB) ಗಾಂಜಾ ಕೃಷಿಯನ್ನು ನಿರ್ಮೂಲನೆ ಮಾಡಲು ವಿಶೇಷ ಜಾರಿ ಬ್ಯೂರೋ (SBE) ‘ಆಪರೇಷನ್ ಪರಿವರ್ತನೆʼ ಅನ್ನು ತೀವ್ರಗೊಳಿಸಿದೆ. ಇದರ ಭಾಗವಾಗಿ ವಿಶಾಖಪಟ್ಟಣ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳ ಬುಡಕಟ್ಟು ಪ್ರದೇಶಗಳಲ್ಲಿ ಐದು ದಿನಗಳಿಂದ ಬುಡಕಟ್ಟು ಜನಾಂಗದಕ್ಕೆ ಜಾಗೃತಿ ಮೂಡಿಸಲು ಜಾಗೃತಿ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಗಾಂಜಾ ಕೃಷಿಯ ದುಷ್ಪರಿಣಾಮಗಳ ಬಗ್ಗೆ ಪೊಲೀಸರು, ತಜ್ಞರು ಆದಿವಾಸಿಗಳಿಗೆ ತಿಳಿ ಹೇಳಿದ್ರು. ಮತ್ತೊಂದೆಡೆ, ಎಸ್‌ಇಬಿ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸುವ ಸಲುವಾಗಿ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸುವ ಮೂಲಕ ಎಲ್ಲೆಡೆ ಬಲೆ ಬೀಸಿದ್ದಾರೆ. ಒಟ್ಟು 283 ಪ್ರಕರಣಗಳು ದಾಖಲಾಗಿದ್ದು, 763 ಜನರನ್ನು ಬಂಧಿಸಲಾಗಿದೆ. 9,266 ಕೆಜಿ ಗಾಂಜಾ, 179 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಶಾಖಪಟ್ಟಣಂ ಏಜೆನ್ಸಿಯಲ್ಲಿ ಗಾಂಜಾ ಬೆಳೆಯನ್ನು ನಾಶ ಮಾಡಲಾಗಿದೆ. ವಿಶೇಷ ಬ್ಯೂರೋದ ಜಂಟಿ ನಿರ್ದೇಶಕ ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿಗಳು ಮುಂದುವರೆದಿದೆ. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಅಬಕಾರಿ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ 7 ತಂಡಗಳಾಗಿ ಪಡೇರುನಲ್ಲಿ ಬೀಡು ಬಿಟ್ಟಿದ್ದಾರೆ.  ಜಿ.ಮಡುಗುಳ, ಗುಡೇಂಕೊತ್ತವೀದಿ, ಚಿಂತಪಲ್ಲಿ ಮಂಡಲಗಳಲ್ಲಿ 260 ಎಕರೆ ಗಾಂಜಾ ತೋಟಕ್ಕೆ ಬೆಂಕಿ ಹಚ್ಚಿ  ನಾಶಪಡಿಸಲಾಗಿತ್ತು.

ಅನಕಾಪಲ್ಲಿ ಸಹಾಯಕ ಜಾರಿ ನಿರ್ದೇಶಕರ ನೇತೃತ್ವದಲ್ಲಿ ಜಿ.ಮಡುಗುಳ ವಲಯದ ಬೋಯಿತಿಲಿ ಪ್ರದೇಶದಲ್ಲಿ 40 ಎಕರೆ, ಗುಪ್ಪಾ ಬೀದಿಯಲ್ಲಿ 40 ಎಕರೆ, ಮೇಲಿನ ವಾಕಪಲ್ಲಿ 55 ಎಕರೆ, ಕೆಳಗಿನ ವಾಕಪಲ್ಲಿಯಲ್ಲಿ 55 ಎಕರೆ ಪ್ರದೇಶದಲ್ಲಿ ಸುಮಾರು 2 ಲಕ್ಷ ಗಾಂಜಾ ಗಿಡಗಳನ್ನು ಕಿತ್ತು ಬೆಂಕಿ ಹಚ್ಚಲಾಗಿದೆ.  ಗುಡೆಂಕೊತ್ತವೀಧಿ ವಲಯದ ರಿಂಟಾಡಾ, ದ್ಯಾಮನಪಲ್ಲಿ ಪಂಚಾಯಿತಿ ವ್ಯಾಪ್ತಿಯ ಸೀಗಿನಪಲ್ಲಿ, ನಲ್ಲಬೆಲ್ಲಿ, ತುಪ್ಪಲದೊಡ್ಡಿ, ಗುರ್ರಲವೀಧಿ, ಆಸರದ, ಕಾಕರಪಾಡು ಗ್ರಾಮಗಳಲ್ಲಿ ಸುಮಾರು 50 ಎಕರೆ ಹಾಗೂ ಚಿಂತಪಲ್ಲಿ ವಲಯದ ಟೇಕುಲವೀದಿ, ಗಡಪಾರಿಯಲ್ಲಿ 20 ಎಕರೆ ಪ್ರದೇಶದಲ್ಲಿ ಗಾಂಜಾ ಬೆಳೆ ನಾಶವಾಗಿದೆ.

Share Post