ಲೈಗರ್ ಸಿನಿಮಾ ಸೋಲು ಹಿನ್ನೆಲೆ; ಪುರಿ ಮನೆ ಮುಂದೆ ದರಣಿಗೆ ವಿತರಕರ ನಿರ್ಧಾರ
ಹೈದರಾಬಾದ್; ಪುರಿ ಜಗನ್ನಾಥ್ ನಿರ್ದೇಶನದ ತೆಲುಗಿನ ʻಲೈಗರ್ʼ ಸಿನಿಮಾ ಹೀನಾಯವಾಗಿ ಸೋತಿದ್ದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಹೀಗಾಗಿ ಭಾರಿ ಮೊತ್ತಕ್ಕೆ ಸಿನಿಮಾ ವಿತರಣೆ ಹಕ್ಕುಗಳನ್ನು ಪಡೆದವರು ಈಗ ಬೀದಿಗೆ ಬಂದಿದ್ದಾರೆ. ತಮ್ಮ ಹಣ ವಾಪಸ್ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ ವಿತರಕರು ನಿರ್ದೇಶಕ ಪುರಿ ಜಗನ್ನಾಥ್ ಮನೆ ಮುಂದೆ ಧರಣಿ ಕೂರಲು ನಿರ್ಧಾರ ಮಾಡಿದ್ದಾರೆ.
ಇತ್ತೀಚೆಗೆ ಪುರಿ ಜಗನ್ನಾಥ್ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ‘ನನಗೆ ಬ್ಲ್ಯಾಕ್ ಮೇಲ್ ಮಾಡಿದರೆ, ಹೆದರಿಸಿದರೆ ಒಂದು ಪೈಸೆ ಕೂಡಾ ಸಿಗುವುದಿಲ್ಲ’ ಎಂದು ಪುರಿ ಜಗನ್ನಾಥ್ ಹೇಳಿರುವ ಆಡಿಯೋ ಒಂದು ಕೂಡಾ ವೈರಲ್ ಆಗಿತ್ತು. ಈ ಬೆನ್ನಲ್ಲೇ ವಿತರಕರು, ಪುರಿ ಜಗನ್ನಾಥ್ ಮನೆ ಮುಂದೆ ಧರಣಿ ಕೂರಲು ನಿರ್ಧಾರ ಮಾಡಿದ್ದಾರೆ.
ಮೊದಲ ವಾರವೇ ನೂರು ಕೋಟಿ ಕ್ಲಬ್ ಗೆ ಈ ಸಿನಿಮಾ ಸೇರಲಿದೆ ಎಂದು ಚಿತ್ರದ ನಾಯಕ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಆದ್ರೆ, ಸಿನಿಮಾನೇ ಒಂದು ವಾರ ಕೂಡಾ ಓಡಲಿಲ್ಲ.