National

ಮಾಸ್ಕ್‌ ಹಾಕಿ ಅಂದಿದ್ದೇ ತಪ್ಪಾಯ್ತು; ಗುಂಡು ಹಾರಿಸಿದ ವ್ಯಕ್ತಿ

ನವದೆಹಲಿ: ಕೊವಿಡ್‌ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್‌ ಹಾಕದಿದ್ದರೆ ದಂಡ ಕೂಡಾ ವಿಧಿಸಲಾಗುತ್ತಿದೆ. ಆದ್ರೆ, ದೆಹಲಿಯ ಸೀಮಾಪುರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮಾಸ್ಕ್‌ ಧರಿಸದೇ ಓಡಾಡುತ್ತಿದ್ದುದಲ್ಲದೆ, ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿದ ಘಟನೆ ನಡೆದಿದೆ. ಮಾಸ್ಕ್‌ ಹಾಕಪ್ಪ ಎಂದಿದ್ದಕ್ಕೆ ಆತ ಗನ್‌ ತೆಗೆದು ಗುಂಡು ಹಾರಿಸಿದ ಘಟನೆ ನಡೆದಿದೆ.

   ಇಲ್ಲಿ ದಿಲ್ಶಾನ್‌ ಗಾರ್ಡನ್‌ನಲ್ಲಿ ಕಾರಿನಲ್ಲಿ ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರು ಕುಳಿತಿದ್ದರು. ಮೂವರೂ ಮಸ್ಕ್‌ ಧರಿಸಿರಲಿಲ್ಲ. ಇದನ್ನು ನೋಡಿದ, ಗಸ್ತು ತಿರುಗುತ್ತಿದ್ದ ಪೊಲೀಸರು ಮಾಸ್ಕ್‌ ಹಾಕುವಂತೆ ಸೂಚಿಸಿದ್ದಾರೆ. ಈ ವೇಳೆ ಪೊಲೀಸ್‌ ಸಿಬ್ಬಂದಿಯೊಂದಿಗೆ ಮೂವರೂ ಅನುಚಿತವಾಗಿ ವರ್ತಿಸಿದ್ದಾರೆ. ಸಾಲದೆಂಬಂತೆ ಕಾರಿನಲ್ಲಿ ಕುಳಿತಿದ್ದ ಮಹಿಳೆಯರಲ್ಲಿ ಒಬ್ಬ ಮಹಿಳೆ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಕಪಾಳ ಮೋಕ್ಷ ಕೂಡಾ ಮಾಡಿದ್ದಾಳೆ.

ಇನ್ನು ಪೊಲೀಸರು ಇದನ್ನು ಪ್ರಶ್ನಿಸಿದ್ದಕ್ಕೆ ಮಾರಿನಲ್ಲಿದ್ದ ವ್ಯಕ್ತಿ ತನ್ನ ಕಿಸೆಯಲ್ಲಿದ್ದ ಗನ್‌ ತೆಗೆದು ಗುಂಡು ಹಾರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪಟ್ಟರ್‌ಗಂಜ್‌ ನಿವಾಸಿಗಳಾದ ಮೂವರನ್ನೂ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಗುಂಡು ಹಾರಿಸಿದ ಆರೋಪಿ ವಕೀಲ ಎಂದು ತಿಳಿದುಬಂದಿದೆ.

Share Post