National

ನಿನ್ನೆ ಒಂದೇ ದಿನಕ್ಕೆ 50 ಸಾವಿರ ಕೋವಿಡ್‌ ಕೇಸ್‌ ದಾಖಲು

ನವದೆಹಲಿ : ಭಾರತದಲ್ಲಿ ಮೂರನೇ ಅಲೆ ವ್ಯಪಿಸುತ್ತಿದೆ. ನಿನ್ನೆ ಒಂದೇ ದಿನ ಭಾರತದಲ್ಲಿ ೫೦ ಸಾವಿರ ಕೋವಿಡ್ ಕೇಸ್‌ ದೃಢಪಟ್ಟಿವೆ. ಮಹಾರಾಷ್ಟ್ರ, ದೆಹಲಿ, ಕೇರಳ ಕರ್ನಾಟಕ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್‌ ಸಂಖ್ಯೆ ವೇಗವಾಗಿ ಏರುತ್ತಿದೆ. ಮಂಗಳವಾರದ ಕೋವಿಡ್ ವರದಿಯ ಪ್ರಕಾರ ದೇಶದಲ್ಲಿ ಒಂದೇ ದಿನ 50,000 ಕ್ಕೂ ಹೆಚ್ಚಿನ ಕೋವಿಡ್ ಕೇಸ್‌ಗಳು ಪತ್ತೆಯಾಗಿವೆ

ಮಹಾರಾಷ್ಟ್ರ – 18,466

ಪಶ್ಚಿಮ ಬಂಗಾಳ – 9,073

ದೆಹಲಿ – 5,481

ಕೇರಳ – 3,640

ತಮಿಳುನಾಡು – 2,731

ಕರ್ನಾಟಕ – 2,479

ಗುಜರಾತ್ – 2,265

ರಾಜಸ್ಥಾನ – 1,137

ಲಂಗಾಣ – 1,052

ಪಂಜಾಬ್ – 1,027

ಬಿಹಾರ – 893

ಒಡಿಶಾ – 680

ಗೋವಾ – 592

ಆಂಧ್ರಪ್ರದೇಶ – 334

ಹಿಮಾಚಲ ಪ್ರದೇಶ – 260.

ವೇಗವಾಗಿ ಹರಡುತ್ತಿರುವ ಮೂರನೆ ಅಲೆಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಸರ್ಕಾರ ವೀಕೆಂಡ್ ‌ಕರ್ಫ್ಯೂ ಮತ್ತು ನೈಟ್‌ ಕರ್ಫ್ಯೂ ಜಾರಿ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಿದೆ.  ಕೋವಿಡ್‌ ಹೆಚ್ಚಳ ಕೈ ಮೀರುವ ಮುನ್ನ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿ ಸರ್ಕಾರ ಎಚ್ಚೆತ್ತುಕೊಂಡಿದೆ.

Share Post