ಮಹಿಳೆಯರಿಂದ ಠಾಣೆಯಲ್ಲೇ ಮಸಾಜ್; ಪೊಲೀಸ್ ಅಧಿಕಾರಿ ಅಮಾನತು
ಪಟ್ನಾ: ದೂರು ದಾಖಲಿಸಲು ಬರುವ ಮಹಿಳೆಯರಿಂದ ಠಾಣೆಯಲ್ಲೇ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಅಮಾನತಿ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿ ಸಹರ್ಸಾ ಜಿಲ್ಲೆಯ ನೌಹಟ್ಟಾ ಠಾಣೆಯ ಶಿಶಿಭುಷಣ್ ಸಿನ್ಹಾ ಅಮಾನತುಗೊಂಡ ಅಧಿಕಾರಿ. ಶಶಿಭೂಷಣ್ ಅವರು ಮಹಿಳೆಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನೌಹಟ್ಟಾ ಠಾಣೆಯ ಔಟ್‌ಪೋಸ್ಟ್‌ನಲ್ಲಿರುವ ವಸತಿ ಗೃಹದಲ್ಲಿ ಈ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಶಶಿಭೂಷಣ ಸಿನ್ಹಾ ಅವರು ಶರ್ಟ್ ಇಲ್ಲದೆ ಮಹಿಳೆಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದು ಫೋನ್‌ನಲ್ಲಿ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಹರ್ಸಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್, ಶಶಿಭೂಷಣ ಸಿನ್ಹಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.