ರಾಹುಲ್ ಗಾಂಧಿಯವರನ್ನು ಮದುವೆಯಾಗ್ತಾರಂತೆ ನಟಿ ಶೆರ್ಲಿನ್ ಚೋಪ್ರಾ
ಮುಂಬೈ; ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಅವರು ರಾಹುಲ್ ಗಾಂಧಿಯವರನ್ನು ಮದುವೆಯಾಗಲು ರೆಡಿ ಇದ್ದಾರಂತೆ. ಆದ್ರೆ ಅವರಲ್ಲಿ ಒಂದೇ ಒಂದು ಷರತ್ತಿದೆಯಂತೆ. ಅದಕ್ಕೆ ಒಪ್ಪಿದರೆ ರಾಹುಲ್ ಗಾಂಧಿಯವರನ್ನು ಮದುವೆಯಾಗಲು ರೆಡಿ ಎಂದಿದ್ದಾರೆ. ಮದುವೆಯಾದ ನಂತರವೂ ನನನ್ನ ಸರ್‌ನೇಮ್ ಬದಲಾವಣೆ ಮಾಡುವುದಿಲ್ಲ. ಅದಕ್ಕೆ ಒಪ್ಪುವುದಾದರೆ ರಾಹುಲ್ ಗಾಂಧಿ ಜೊತೆ ಮದುವೆಗೆ ಸಿದ್ದ ಎಂದು ನಟಿ ಹೇಳಿದ್ದಾರೆ.
ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಮುಂಬೈನ ಬಾಂದ್ರದಲ್ಲಿ ನಟ ಶೆರ್ಲಿನ್ ಚೋಪ್ರಾ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಈ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿಯವರನ್ನು ಮದುವೆಯಾಗುತ್ತೀರಾ ಎಂದು ಫನ್ನಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶೆರ್ಲಿನ್ ಚೋಪ್ರಾ ಅವರು, ವೈ ನಾಟ್ ಎಂದು ಪ್ರಶ್ನೆ ಮಾಡಿದ್ದಾರೆ. ನಂತರ ಮದುವೆಗೆ ನಾನು ರೆಡಿ. ಆದ್ರೆ ಮದುವೆ ನಂತರ ನನ್ನ ಸರ್ ನೇಮ್ ಬದಲಾಗಬಾರದು ಎಂದು ಷರತ್ತು ವಿಧಿಸಿದ್ದಾರೆ.
ಇದು ಬರೀ ಫನ್ನಿಯಾಗಿ ಹೇಳಿದ ಮಾತಾದರೂ, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.