National

ಓಮಿಕ್ರಾನ್‌ ಸೋಂಕಿಗೆ ದೇಶದಲ್ಲಿ ಮೊದಲ ಸಾವು

ನವದೆಹಲಿ : ಭಾರತದಲ್ಲಿ ಬುಧವಾರ ಓಮಿಕ್ರಾನ್‌ ಸೋಂಕಿಗೆ ಮೊದಲ ಸಾವು ಸಂಭವಿಸಿದೆ. ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ರೂಪಾಂತರಿ ವೈರಸ್‌ಗೆ ಬಲಿಯಾಗಿದ್ದಾರೆ. ರಾಜಸ್ಥಾನ ರಾಜ್ಯದ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ದೇಶದಲ್ಲಿ ಈಗಾಗಲೇ ಓಮಿಕ್ರಾನ್‌ ಸೋಂಕಿನ್‌ ಸಂಖ್ಯೆ 2135 ಕ್ಕೆ ಏರಿದೆ. ವೇಗವಾಗಿ ಹರಡುವ ಈ ವೈರಾಣುವನ್ನು ತಡೆಗಟ್ಟಲು ವಿವಿಧ ರಾಜ್ಯಗಳು ನೈಟ್‌ ಕರ್ಫ್ಯೂ ಮತ್ತು ಇನ್ನಷ್ಟು ಬಿಗಿ ಕ್ರಮಗಳನ್ನು ಅನುಸರಿಸುತ್ತಿವೆ. ಬಹುತೇಕ ರಾಜ್ಯಗಳಲ್ಲಿ ಈ ರೂಪಾಂತರಿ ವೈರಸ್‌ ತನ್ನ ಅಟ್ಟಹಾಸ ಮೆರೆಯಲು ಶುರುಮಾಡಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಕೇಸ್‌ ದಾಖಲಾಗಿದೆ (653). ಇನ್ನು ದೆಹಲಿಯಲ್ಲಿ 464 ಪ್ರಕರಣಗಳು ದೃಢಪಟ್ಟಿವೆ.

ಓಮಿಕ್ರಾನ್‌ ಸೋಂಕಿನ ಜೊತೆಗೆ ಕೋವಿಡ್‌ ಕೂಡ ತನ್ನ ಹರಡುವಿಕೆಯನ್ನು ಹೆಚ್ಚಿಸಿದೆ. ತಜ್ಞರು ಇದನ್ನು ಮೂರನೇ ಅಲೆ ಎಂದು ಘೋಷಣೆ ಮಾಡಿದ್ದಾರೆ. ಕೋವಿಡ್‌ ನಿಯಂತ್ರಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್‌ ಮೊರೆ ಹೋಗುತ್ತಾ ಎಂದು ಕಾದು ನೋಡಬೇಕಿದೆ.

Share Post