ಮೋದಿ ರಿಪೋರ್ಟ್ ಕಾರ್ಡ್: ಚರ್ಚೆಗೆ ಕಾರಣವಾದ ಸುಬ್ರಮಣಿಯನ್ ಟ್ವೀಟ್
ನವದೆಹಲಿ: ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಹರಿಹಾಯುವ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಈಗ ಮತ್ತೆ ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ಟ್ವೀಟ್ ಮಾಡಿ ಚರ್ಚೆಗೆ ಕಾರಣರಾಗಿದ್ದಾರೆ.
ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರವನ್ನು ಲೇವಡಿ ಮಾಡುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್‌ನ ವಿವರ ಈ ರೀತಿ ಇದೆ.
ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್
- ಆರ್ಥಿಕ ವ್ಯವಸ್ಥೆ – ಫೇಲ್
- ಗಡಿ ಭದ್ರತೆ – ಫೇಲ್
- ವಿದೇಶಾಂಗ ನೀತಿ – ಅಫ್ಘಾನಿಸ್ತಾನದಲ್ಲಿ ವೈಫಲ್ಯ
- ಭದ್ರತೆ – ಪೆಗಾಸನ್ ಎನ್‌ಎಸ್‌ಒ
- ಆಂತರಿಕ ಭದ್ರತೆ – ಕಾಶ್ಮೀರದಲ್ಲಿ ಅಂಧಕಾರ
ಇದಕ್ಕೆಲ್ಲಾ ಯಾರು ಹೊಣೆ ಎಂದು ಟ್ವೀಟ್ ಮೂಲಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.