National

ಸಮಾಜ ಸೇವೆ ಎಂಬುದು ನಮ್ಮ ರಕ್ತದಲ್ಲಿದೆ:ಸೋನು ಸೂದ್

ಪಂಜಾಬ್:‌ ಬಹುಭಾಷಾ ನಟ ಸೋನು ಸೂದ್ ಬಡವರ ಪಾಲಿನ ಬಂಧು, ವಿದ್ಯಾರ್ಥಿಗಳ ಪಾಲಿನ ಗುರು, ಸಾಮಾನ್ಯ ಜನರ ದೈವ ಆಗಿದ್ದಾರೆ. ಅನೇಕ ಮಂದಿ ಬಡ ವಿದ್ಯಾರ್ಥಿಗಳಿಗೆ, ಅನಾಥರಿಗೆ, ವೃದ್ಧರಿಗೆ, ಆರೋಗ್ಯ, ವಸತಿ, ಆಹಾರ ಮುಂತಾದ ವಿಚಾರಗಳಿಗೆ ಸಂಭಂಧಿಸಿದಂತೆ ಫೌಂಡೇಷನ್‌ ಮೂಲಕ ಸಾಮಾಜ ಸೇವೆ ಕಾರ್ಯ ಕೈಗೊಂಡಿದ್ದಾರೆ. ಕೊರೊನಾ ಮೊದಲನೇ ಅಲೆ ಶುರುವಾದಗಿನಿಂದ ಇದುವರೆಗೆ ಸಾಕಷ್ಟು ಜನರಿಗೆ ಸಹಾಯ ಹಸ್ತ ನೀಡಿದ್ದಾರೆ ಹಾಗಾಗಿ ಇವರನ್ನು ಜನ ನಿಜವಾದ ಹೀರೋ ಅಂತ ಕೂಡ ಕರೆಯತ್ತಾರೆ. ತಮ್ಮ ಸಮಾಜ ಸೇವೆ ಹಾಗೂ ಸಹೋದರಿಯ ರಾಜಕೀಯ ವಿಚಾರ ಕುರಿತು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ನನ್ನ ತಾಯಿ ಪ್ರಾಧ್ಯಾಪಕ ವೃತ್ತಿ ಮಾಡ್ತಿದಾರೆ, ತಮ್ಮ ಜೀವನದುದ್ದಕ್ಕೂ ಮಕ್ಕಳಿಗೆ ವಿದ್ಯೆಯನ್ನಿ ಕಲಿಸಿದ್ದಾರೆ. ನನ್ನ ತಂದೆ ಸಮಾಜ ಸೇವಕರಾಗಿದ್ದರು. ಇಲ್ಲಿನ ಕೆಲ ಶಾಲೆಗಳು, ಕಾಲೇಜುಗಳು ಮತ್ತು ಧರ್ಮಶಾಲೆಗಳನ್ನು ನಮ್ಮ ಸ್ವಂತ  ಜಮೀನಿನಲ್ಲಿ ನಿರ್ಮಿಸಲಾಗಿದೆ. ಸಮಾಜ ಸೇವೆ ಕಾರ್ಯ ಎಂಬುದು ಇದು ನಮ್ಮ ರಕ್ತದಲ್ಲಿ ಬಂದಿದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ.

ಇನ್ನೂ ನನ್ನ ಸಹೋದರಿ ಮಾಳವಿಕಾ ಸೂದ್ ಮೊಗಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಈಗ ಅವಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಕೊರೊನಾ ಸಂಬಂಧಿಸಿದಂತೆ ನಮ್ಮ ನಗರದಲ್ಲಿ ಗರಿಷ್ಠ ಮಟ್ಟದಲ್ಲಿ ವ್ಯಾಕ್ಸಿನೇಷನ್‌  ನೀಡುವ ಕಾರ್ಯ ನಡೆದಿದೆ. ಶಿಕ್ಷಣ ಮತ್ತು ಜನರಿಗೆ ಸಹಾಯ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ, ಜೊತೆಗೆ ಮೊಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಾಳೆ ಎಂಬ ಭರವಸೆಯಿದೆ ಎಂದಿದ್ದಾರೆ.

Share Post