CinemaNational

ನಟಿ ಕಂಗನಾ ರನೌತ್ ಗೆ ಸಮನ್ಸ್‌ ಜಾರಿ

ಮುಂಬೈ : ನಟಿ ಕಂಗನಾ ರನೌತ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಖ್ಖರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದತೆಯ ಮೇಲಿನ ಸಮಿತಿಯವರು ಸಮನ್ಸ್‌ ಜಾರಿ ಮಾಡಿದ್ದಾರೆ. ಡಿಸೆಂಬರ್‌ ೬ರ ಒಳಗೆ ಉತ್ತರಿಸುವಂತೆ ಸಮನ್ಸ್‌ ಜಾರಿ ಆಗಿದೆ.

ಸಿಖ್‌ ಸಾಮೂಹಿಕ ಹತ್ಯೆ ಮತ್ತು ನರಮೇಧವನ್ನು ನೆನೆಪಿಸಿಕೊಂಡಿದ್ದ ಕಂಗನಾ, ಇವು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ವ್ಯವಹಾರಿಕ ಮತ್ತು ಯೋಜಿತ ತಡೆ. ಸಿಖ್‌ ಸಮುದಾಯದವರು ಇಂದಿರಾ ಗಂಧಿ ಶೂ ಕೆಳಗೆ ನಲುಗಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

Share Post