National

ಪುಣೆಯಲ್ಲಿ ಮೂರು ಚಿರತೆ ಮರಿಗಳ ರಕ್ಷಣೆ :ತಾಯಿ ಚೀತಾಗಾಗಿ ಹುಡುಕಾಟ

ಮಹಾರಾಷ್ಟ್ರ: ಮನುಷ್ಯರೇ ಅಲ್ಲ ಪ್ರಾಣಿಗಳು ಕೂಡ ತಪ್ಪಿಸಿಕೊಳ್ಳುತ್ತವೆ. ಅದು ಬೆಕ್ಕು, ನಾಯಿ, ಸಾಕು ಪ್ರಾಣಿ ಕಾಡು ಪ್ರಾಣಿ ಯಾವುದೇ ಆಗಿರಬಹುದು ಕೆಲವೊಮ್ಮೆ ದಾರಿ ತಪ್ಪಿ ತಮ್ಮ ಸ್ವಂತ ನೆಲೆಯಿಂದ ಇನ್ನೊಂದೆಡೆಗೆ ದಾರಿ ತಪ್ಪಿ ಬರುವ ಸಾಧ್ಯತೆಗಳೂ ಇವೆ. ಅದರಲ್ಲಿ ಸಣ್ಣ-ಸಣ್ಣ ಮರಿಗಳ ತಪ್ಪಿಸಿಕೊಳ್ಳುವಿಕೆಯನ್ನು ಹೆಚ್ಚಾಗಿ ಕಾಣಬಹುದು.

ಅದರಂತೆಯೇ ತನ್ನ ತಾಯಿಯಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಬಂದ ಮೂರು ಪುಟ್ಟ ಚಿರತೆಗಳನ್ನು ರಕ್ಷಣೆ ಮಾಡಿರುವ ಘಟನೆ ಪುಣೆಯ ಹಿಂಜಾವಾಡಿಯ ನೆರೆ ಗ್ರಾಮದಲ್ಲಿ ನಡೆದಿದೆ. ಮೂರು ಮರಿಗಳು 15 ದಿನದಿಂದ ಹಿಡಿದು ಒಂದು ತಿಂಗಳ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲಿ ಎರಡು ಹೆಣ್ಣು ಚಿರತೆ ಮತ್ತು ಒಂದು ಗಂಡು ಚಿರತೆಯಿದೆ. ಮೂರು ಚಿರತೆಗಳನ್ನು ಅರಣ್ಯ ಇಲಾಖೆ ಹಾಗೂ RESQ ಚಾರಿಟೇಬಲ್ ಟ್ರಸ್ಟ್‌ ತಂಡದ ಅಧಿಕಾರಿಗಳ ರಕ್ಷಿಸಿ ಆರೈಕೆ ಮಾಡುತ್ತಿದ್ದಾರೆ. ನೋಡೋಕೆ ಬೆಕ್ಕಿನ ಮರಿಗಳ ಹಾಗೆ ಥೇಟ್‌ ಬೆಕ್ಕಿ ಮರಿಗಳ  ಹಾಗೆಯೇ ಮುದ್ದಾಗಿವೆ ಈ ಚಿರತೆ ಮರಿಗಳು. ಸದ್ಯಕ್ಕೆ  ತಾಯಿ ಚಿರತೆಯೊಂದಿಗೆ ಸೇರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Share Post