ಕೊಂಚ ನಿಟ್ಟುಸಿರು ಬಿಟ್ಟ ಹೋಟೆಲ್ ಮಾಲೀಕರು
ಬೆಂಗಳೂರು: ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ.ಇಂದಿನಿಂದ ಜನವರಿ ೭ರ ವರೆಗೆ ನೈಟ್ ಕರ್ಫ್ಯೂ ವಿಧಿಸಲಿದ್ದಾರೆ. ಈಗಾಗಲೇ ನೈಟ್ ಕರ್ಫ್ಯೂಗೆ ಸಿಲಿಕಾನ್ ಸಿಟಿಯಲ್ಲಿ ಕೌಂಟ್ ಡೌನ್ ಶುರುವಾಗಿದೆ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಹಾಗೂ ಒಮಿಕ್ರಾನ್ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಷೇಧಾಜ್ಞೆ ಹೇರಿದೆ.ರಾತ್ರಿ ೧೦ ಗಂಟೆಯಿಂದ ೫ ಗಂಟೆಯವರೆಗೆ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹೀಗಾಗಿ ಅನಗತ್ಯ ಓಡಾಡುವುವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ರೆಡಿಯಾಗಿದ್ದಾರೆ. ಜೊತೆಗೆ ಟ್ಯಾಕ್ಸಿ, ಆಟೋ ಸೇರಿದಂತೆ ಮುಂತಾದ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಅಷ್ಟೆ ಅಲ್ಲದೆ ಚಿತ್ರಮಂದಿರ, ಹೋಟೆಲ್ , ಬಾರ್ , ಪಬ್ ಗಳಲ್ಲಿ ಶೇ. ೫೦ ರಷ್ಟು ಜನರಿಗೆ ಮಾತ್ರ ಅನುಮತಿ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಕೆಲ ಹೋಟೆಲ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಿನ್ನೆಲೆಯಲ್ಲಿ ಇಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಗ್ರಾಟಹಕರಿಗೆ ಆಹಾರ ಮತ್ತು ಜ್ಯೂಸ್ ನೀಡುವ ಸ್ಥಳಗಳಲ್ಲಿ ಮಾತ್ರ ಶೇ.೫೦ ರಷ್ಟು ಆಸನಗಳಿಗೆ ಸೇವೆ ನೀಡಬೇಕು. ಇನ್ನೂಳಿದ ಕೊಠಡಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಜೊತೆಗೆ ವಾಸ್ತವ್ಯಕ್ಕೆ ಯಾವುದೇ ರೀತಿ ನಿರ್ಬಂಧ ಹೇರುವುದಿಲ್ಲ.
ಇನ್ನು ಬರುವ ಹೊಸ ವರ್ಷಕ್ಕೆ ಹೋಟೆಲ್ ಮತ್ತು ಚಿತ್ರಮಂದಿರಗಳಲ್ಲಿ ಹೆಚ್ಚು ಜನ ಸೇರಬಹುದು ಎಂಬ ಕಾರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಡಿಸೆಂಬರ್ ೩೦ ರಿಂದ ಜನವರಿ ೨ ವರೆಗೆ ಸರ್ಕಾರದ ಕೋವಿಡ್ ನಿಯಮ ಪಾಲಿಸುವ ಸಲುವಾಗಿ ಶೇ,. ೫೦ ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡುವಂತೆ ಆದೇಶಿಸಿದೆ ಎಂದರು.